Asianet Suvarna News Asianet Suvarna News

ಅಂತರಾಷ್ಟ್ರೀಯ ಕ್ರಿಕೆಟ್'ಗೆ ಮಿಸ್ಬಾ ವಿದಾಯ

2010-2017ರ ಅವಧಿಯಲ್ಲಿ ಮಿಸ್ಬಾ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಒಟ್ಟು 53 ಪಂದ್ಯಗಳನ್ನಾಡಿದ್ದು 24 ಗೆಲುವು, 18 ಸೋಲು ಮತ್ತು 11 ಡ್ರಾಗಳನ್ನು ಕಂಡಿವೆ.

Misbah announces retirement from international cricket

ಲಾಹೋರ್(ಏ.06): ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಘೋಷಿಸಿದ್ದಾರೆ. ಇದೇ ವೇಳೆ ದೇಶೀಯ ಕ್ರಿಕೆಟ್'ನಲ್ಲಿ ಕೆಲಕಾಲ ಪಾಲ್ಗೊಳ್ಳುವುದಾಗಿ ಮಿಸ್ಬಾ ಸ್ಪಷ್ಟಪಡಿಸಿದ್ದಾರೆ.

ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 42 ವರ್ಷದ ಮಿಸ್ಬಾ, ಮುಂಬರುವ ವೆಸ್ಟ್ ಇಂಡೀಸ್ ಸರಣಿ ಅಂತರಾಷ್ಟ್ರೀಯ ಮಟ್ಟದಲ್ಲಿ ನನ್ನ ಪಾಲಿನ ಕಡೆಯ ಸರಣಿಯಾಗಿರಲಿದೆ ಎಂದಿದ್ದಾರೆ.

ಪಾಕಿಸ್ತಾನ ತಂಡ 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ವ್ಯಾಪಕ ಟೀಕೆಗೆ ಒಳಗಾದ ಬಳಿಕ ತಂಡದ ನೇತೃತ್ವ ವಹಿಸಿದ ಮಿಸ್ಬಾ, ಪಾಕಿಸ್ತಾನ ಟೆಸ್ಟ್ ತಂಡವನ್ನು ಯಶಸ್ವಿಯಾಗಿ ಮುನ್ನೆಡಿಸಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ತಂಡವನ್ನಾಗಿ ಮುನ್ನೆಡೆಸಿದ್ದರು.

ಇದೇ ವೇಳೆ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಡಬೇಕು ಎನ್ನುವ ನನ್ನ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಿಸ್ಬಾ ನಿರಾಸೆ ವ್ಯಕ್ತಪಡಿಸಿದ್ದಾರೆ.

ಇಲ್ಲಿಯವರೆಗೆ 72 ಟೆಸ್ಟ್ ಪಂದ್ಯಗಳನ್ನಾಡಿರುವ ಮಿಸ್ಬಾ ಉಲ್ ಹಕ್ 44.48ರ ಸರಾಸರಿಯಲ್ಲಿ 4,951 ರನ್ ಕಲೆಹಾಕಿದ್ದಾರೆ. ಇದರಲ್ಲಿ 10 ಆಕರ್ಷಕ ಶತಕ ಮತ್ತು 36 ಅರ್ಧಶತಕಗಳು ಸೇರಿವೆ. ಇನ್ನು 2010-2017ರ ಅವಧಿಯಲ್ಲಿ ಮಿಸ್ಬಾ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಒಟ್ಟು 53 ಪಂದ್ಯಗಳನ್ನಾಡಿದ್ದು 24 ಗೆಲುವು, 18 ಸೋಲು ಮತ್ತು 11 ಡ್ರಾಗಳನ್ನು ಕಂಡಿವೆ.

ಮಿಸ್ಬಾ ಉಲ್ ಹಕ್'ನಿಂದ ತೆರವಾದ ಸ್ಥಾನಕ್ಕೆ ಸರ್ಫ್ರಾಜ್ ಅಹಮದ್ ನೂತನ ನಾಯಕರಾಗಿ ನೇಮಕವಾಗಿದ್ದಾರೆ.  

Follow Us:
Download App:
  • android
  • ios