ನಾಯಕ ರೋಹಿತ್ ಶರ್ಮಾ ಹಾಗೂ ಆರಂಭಿಕ ಆಟಗಾರರಾದ ಇ.ಲೆವಿಸ್, ಸೂರ್ಯಕಾಂತ್ ಯಾದವ್  ಅವರ ಸಮಯೋಚಿತ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ  8 ವಿಕೇಟ್ಗಳ ಗೆಲುವು ಸಾಧಿಸಿದರು.

ಪುಣೆ(ಏ.28): ಐದು ಸೋಲುಗಳನ್ನು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಲಯ ಕಂಡಿಕೊಂಡಿತು. ನಾಯಕ ರೋಹಿತ್ ಶರ್ಮಾ(56) ಹಾಗೂ ಆರಂಭಿಕ ಆಟಗಾರರಾದ ಇ.ಲೆವಿಸ್ (ಲೆವಿಸ್ 47) , ಸೂರ್ಯಕಾಂತ್ ಯಾದವ್ (ಎಸ್.ಯಾದವ್ 44) ಅವರ ಸಮೋಯೋಚಿತ ಅವರ ಸಮಯೋಚಿತ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೇಟ್ಗಳ ಗೆಲುವು ಸಾಧಿಸಿದರು.
ಧೋನಿ ಪಡೆ ನೀಡಿದ್ದ 169 ರನ್'ಗಳ ಗುರಿಯನ್ನು 19.4 ಓವರ್'ಗಳಲ್ಲಿ ತಲುಪಿದರು. ಈ ಜಯದೊಂದಿಗೆ ಮುಂಬೈ ತಂಡ ಐಪಿಎಲ್ ಸರಣಿಯಲ್ಲಿ 2ನೇ ವಿಜಯ ಸಾಧಿಸಿದೆ. ಚೆನ್ನೈಗೆ ಇದು 2ನೇ ಸೋಲು. 
ಟಾಸ್ ಗೆದ್ದ ಮುಂಬೈ ತಂಡದ ರೋಹಿತ್ ಶರ್ಮಾ ಚೆನ್ನೈ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದರು. ಆರಂಭಿಕ ಆಟಗಾರ ವ್ಯಾಟ್ಸ್’ನ್ 4ನೇ ಓವರ್’ನಲ್ಲಿ ಕೆ. ಪಾಂಡ್ಯಾಗೆ ಔಟಾದರು. ನಂತರ 7 ಓವರ್’ಗಳ ಕಾಲ ಆರ್ಭಟಿಸಿದ ರಾಯುಡು(46, 35 ಎಸೆತ, 4 ಸಿಕ್ಸ್’ರ್, 2 ಬೌಂಡರಿ ), ರೈನಾ 2ನೇ ವಿಕೆಟ್’ಗೆ 11.2 ಓವರ್’ಗಳಲ್ಲಿ 97 ರನ್ ಪೇರಿಸಿದರು.
8 ಓವರ್’ಗಳಿದ್ದಂತೆ ಆಗಮಿಸಿದ ನಾಯಕ ಧೋನಿ(26) ರೈನಾ ಜೊತೆ ಸೇರಿ ಬಿರುಸಿನ ಆಟವಾಡಿದರು. ಅಜೇಯವಾಗಿ 75 ರನ್ ಸಿಡಿಸಿದ ರೈನಾ ಆಟದಲ್ಲಿ 4ಸಿಕ್ಸ್’ರ್ ಹಾಗೂ 6 ಬೌಂಡರಿಗಳಿದ್ದವು. ಅಂತಿಮವಾಗಿ ಚೆನ್ನೈ 20 ಓವರ್’ಗಳಲ್ಲಿ 169/5 ರನ್ ದಾಖಲಿಸಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಕೋರ್ 
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್’ಗಳಲ್ಲಿ 169/5
(ರೈನಾ ಅಜೇಯ 75 , ರಾಯುಡು 46, ಧೋನಿ 26)

ಮುಂಬೈ ಇಂಡಿಯನ್ಸ್ 19.4 ಓವರ್’ಗಳಲ್ಲಿ 170/2
(ರೋಹಿತ್ ಅಜೇಯ 56, ಎಸ್.ಯಾದವ್ 44, ಲೆವಿಸ್ 47)