ಮುಂಬೈ(ಮೇ.13): ಗೆಲ್ಲಲೆ ಬೇಕಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್  ವಿರುದ್ಧ 169 ರನ್ ಗುರಿ ನೀಡಿದೆ. 
ಟಾಸ್ ಗೆದ್ದ ಅಜಿಂಕ್ಯಾ ರಹಾನೆ ರೋಹಿತ್ ಶರ್ಮಾ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿದರು.  ಆರಂಭಿಕವಾಗಿ ಉತ್ತಮ ಆಟವಾಡಿದ ಸೂರ್ಯಕಾಂತ್ ಯಾದವ್ ಹಾಗೂ ಇ.ಲೆವಿಸ್ ಮೊದಲ ವಿಕೆಟ್ ಜೊತೆಯಾಟದಲ್ಲಿ 87 ರನ್
ಪೇರಿಸಿದರು. 
ಯಾದವ್ 38(31) ಅರ್ಚರ್ ಬೌಲಿಂಗ್'ನಲ್ಲಿ ಔಟಾದ ನಂತರ ಲೆವಿಸ್(60, 42 ಎಸೆತ, 4 ಸಿಕ್ಸ್, 4 ಬೌಂಡರಿ) ಅರ್ಧ ಶತಕ ಗಳಿಸಿ ಕುಲಕರ್ಣಿ ಬೌಲಿಂಗ್'ನಲ್ಲಿ ಪೆವಿಲಿಯನ್'ಗೆ ತೆರಳಿದರು. ನಾಯಕ ರೋಹಿತ್ ಶರ್ಮಾ  ಮೊದಲ ಎಸತದಲ್ಲಿಯೇ ಔಟಾದರೆ, ವಿಕೇಟ್ ಕೀಪರ್ ಇಸಾನ್ ಕಿಶನ್(12), ಹಾರ್ದಿಕ್ ಪಾಂಡ್ಯ (36)  ರನ್ ಗಳಿಸಿ ತಂಡದ ಮೊತ್ತ 168 ಗಳಿಸಲು ನೆರವಾದರು.  ರಾಜಸ್ಥಾನ್ ಪರ ಅರ್ಚರ್, ಸ್ಟೋಕ್ಸ್ ತಲಾ 2 ವಿಕೇಟ್ ಪಡೆದರು.

ಸ್ಕೋರ್ 
ಮುಂಬೈ ಇಂಡಿಯನ್ಸ್ 20 ಓವರ್'ಗಳಲ್ಲಿ 168/6
(ಲೆವಿಸ್ 60, ಎಸ್. ಯಾದವ್ 38 )

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ
(ವಿವರ ಅಪೂರ್ಣ)