Asianet Suvarna News Asianet Suvarna News

ಸಿಡಿಲಬ್ಬರದ ಆಟದಲ್ಲಿ ಪಂಜಾಬ್'ಗೆ ಜಯ:ಕಿಂಗ್ಸ್ ಇಲೆವೆನ್ ಪ್ಲೇ ಆಫ್ ಆಸೆ ಜೀವಂತ

ಪಂಜಾಬ್' ಈ ಪಂದ್ಯವನ್ನು ಗೆಲ್ಲಲೇ ಬೀಕಿತ್ತು. ಮುಂಬೈ ಅದಾಗಲೇ ಪ್ಲೇ ಆಫ್ ಪ್ರವೇಶಿಸಿ ಆಗಿತ್ತು. ಆದರೆ ಸೋಲುವುದು ಇಬ್ಬರಿಗೂ ಇಷ್ಟವಿರಲಿಲ್ಲ. ಎರಡೂ ತಂಡಗಳ ಆಟಗಾರರು ತಾನೇನು ಕಡಿಮೆಯಿಲ್ಲದಂತೆ ಅಬ್ಬರಿಸಿದರು, ಘರ್ಜಿಸಿದರು. ಅಂತಿಮವಾಗಿ ಒಬ್ಬರಾದರೂ ಸೋಲಬೇಕಲ್ಲವೇ. ಮುಂಬೈ ಸೋತರೂ ಗೆದ್ದಿದ್ದು ಮಾತ್ರ ಕ್ರಿಕೆಟ್.

MI by 7 runs in Wankhede thriller

ಮುಂಬೈ(ಮೇ.11): ಇಂದು ಮುಂಬೈ'ನ ವಾಂಖೇಡೆ ಕ್ರೀಡಾಂಗಣದಲ್ಲಿ  ನಡೆದಿದ್ದು ಗುಡುಗು, ಸಿಡಿಲಿನ ಆಟ.  ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಪ್ರೇಕ್ಷಕರಿಗೆ ಸಿಕ್ಸ್'ರ್, ಬೌಂಡರಿಗಳ ರಸದೌತಣ ನೀಡಿದವು. ರೋಚಕ ಪಂದ್ಯದಲ್ಲಿ ವಿಜಯಮಾಲೆ ಧರಿಸಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ.

ಪಂಜಾಬ್' ಈ ಪಂದ್ಯವನ್ನು ಗೆಲ್ಲಲೇ ಬೀಕಿತ್ತು. ಮುಂಬೈ ಅದಾಗಲೇ ಪ್ಲೇ ಆಫ್ ಪ್ರವೇಶಿಸಿ ಆಗಿತ್ತು. ಆದರೆ ಸೋಲುವುದು ಇಬ್ಬರಿಗೂ ಇಷ್ಟವಿರಲಿಲ್ಲ. ಎರಡೂ ತಂಡಗಳ ಆಟಗಾರರು ತಾನೇನು ಕಡಿಮೆಯಿಲ್ಲದಂತೆ ಅಬ್ಬರಿಸಿದರು, ಘರ್ಜಿಸಿದರು. ಅಂತಿಮವಾಗಿ ಒಬ್ಬರಾದರೂ ಸೋಲಬೇಕಲ್ಲವೇ. ಮುಂಬೈ ಸೋತರೂ ಗೆದ್ದಿದ್ದು ಮಾತ್ರ ಕ್ರಿಕೆಟ್.

ಟಾಸ್ ಗೆದ್ದ ಪಂಜಾಬ್' ಮುಂಬೈ ಪಂಜಾಬ್ ತಂಡವನ್ನು  ಬ್ಯಾಟಿಂಗ್'ಗೆ ಆಹ್ವಾನಿಸಿತು. ನಂತರ ಆಟವಾಡಿದ ಎಲ್ಲ ಆಟಗಾರರು ಅಬ್ಬರಿಸಿದರು. ಪ್ರೇಕ್ಷಕರಿಗೆ ಹೆಚ್ಚು ಮನರಂಜನೆಯನ್ನು ನೀಡಿದ್ದು ಮಾತ್ರ  ವೃದ್ದಿ ಮಾನ್ ಸಹಾ, ಮ್ಯಾಕ್ಸ್'ವೆಲ್ ಹಾಗೂ ಗುಪ್ಟಿಲ್ ಉಳಿದ ಇಬ್ಬರು ಆಟಗಾರರಾದ ಮಾರ್ಶ್ ಮತ್ತು ಅಕ್ಷರ್ ಪಟೇಲ್ ತಮ್ಮ ಆಟಕ್ಕೆ ಮೋಸ ಮಾಡದೇ ಸಮಯೋಚಿತವಾಗಿಯೇ ಬ್ಯಾಟ್ ಬೀಸಿದರು.

ಅಂತಿಮವಾಗಿ ಸಹಾ 55 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸ್'ರ್'ಗಳೊಂದಿಗೆ 93 ರನ್ ಬಾರಿಸಿದರೆ, ಮ್ಯಾಕ್ಸ್'ವೆಲ್ 21 ಎಸೆತಗಳಲ್ಲಿ 5 ಸಿಕ್ಸ್'ರ್, 2 ಬೌಂಡರಿಗಳೊಂದಿಗೆ 47 ರನ್ ಸಿಡಿಸಿದರು.

ಗುಪ್ಟಿಲ್ (36: 18 ಎಸೆತ, 5 ಬೌಂಡರಿ, 1 ಸಿಕ್ಸ್'ರ್), ಮಾರ್ಶ್ (25: 16 ಎಸೆತ, 2 ಸಿಕ್ಸ್'ರ್), ಅಕ್ಸರ್ ಪಟೇಲ್ (19: 13ಎಸೆತ, 1 ಸಿಕ್ಸ್'ರ್) ರನ್ ಗಳಿಸುವುದರೊಂದಿಗೆ 20 ಓವರ್'ಗಳಲ್ಲಿ  ಬೃಹತ್ 230 ರನ್ ಗಳಿಸಿತು. ಈ ಮೊತ್ತ 10 ಆವೃತ್ತಿಯಲ್ಲಿ ಗಳಿಸಿದ ಬೃಹತ್ ಮೊತ್ತವಾಗಿದೆ.

ಅಬ್ಬರಿಸಿದ ಸಿಮನ್ಸ್, ಪೊಲ್ಲಾರ್ಡ್, ಪಾಂಡ್ಯ  

230 ರನ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ತಾನೇನು ಕಡಿಮೆಯೇನಿಲ್ಲ ಎಂಬಂತೆ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು.

ಆರಂಭಿಕ ಆಟಗಾರರಾದ ಸಿಮನ್ಸ್(59: 32 ಎಸೆತ, 4 ಸಿಕ್ಸ್'ರ್, 5 ಬೌಂಡರಿ ), ಅಕ್ಷರ್ ಪಟೇಲ್(38:23 ಎಸೆತ, 7 ಬೌಂಡರಿ) ಮೊದಲ ವಿಕೇಟ್ ನಷ್ಟಕ್ಕೆ 8.4 ಓವರ್'ಗಳಲ್ಲಿ 99 ರನ್ ಸಿಡಿಸಿದರು.  ನಾಯಕ ರೋಹಿತ್ ಶರ್ಮಾ(5) ಹಾಗೂ ರಾಣಾ(12) ಅಷ್ಟೇನು ರನ್ ಗಳಿಸಲಿಲ್ಲ.

ನಂತರ ಮೈದಾನ ಪ್ರವೇಶಿಸಿದ ಪೊಲ್ಲಾರ್ಡ್(50: 24 ಎಸೆತ, 5 ಸಿಕ್ಸ್'ರ್, ಒಂದು ಬೌಂಡರಿ) ಹಾಗೂ ಹರ್ದಿಕ್ ಪಾಂಡ್ಯ(30:13 ಎಸೆತ, 4 ಸಿಕ್ಸ್'ರ್) ಸಿಕ್ಸ್'ರ್'ಗಳ ಮಳೆಗೈದರು. ಇವರಿಬ್ಬರೆ ಆಟ ಮುಗಿಸುತ್ತಾರೆ ಎನ್ನುವಷ್ಟರಲ್ಲಿಯೇ ಪಾಂಡ್ಯ ಸಂದೀಪ್ ಶರ್ಮಾ ಬೌಲಿಂಗ್'ನಲ್ಲಿ ಸಾಹಾ'ಗೆ ಕ್ಯಾಚಿತ್ತು ಔಟಾದರು.

ನಂತರ ಆಗಮಿಸಿದ ಕರಣ್ ಶರ್ಮಾ ಕೂಡ ಕೇವಲ 6 ಎಸೆತಗಳಲ್ಲಿ 1 ಸಿಕ್ಸ್'ರ್ 3 ಬೌಂಡರಿಗಳೊಂದಿಗೆ 19 ರನ್'ಗಳಿಸಿ ಪೆವಿಲಿಯನ್'ಗೆ ತೆರಳಿದರು. ಕೊನೆಯ ಓವರ್'ನಲ್ಲಿ  ಮುಂಬೈ'ಗೆ ಪಂದ್ಯ ಗೆಲ್ಲಲು 15 ರನ್ ಬೇಕಾಗಿತ್ತು.  ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡಿದ ಮೋಹಿತ್ ಶರ್ಮಾ ಕೇವಲ 8 ರನ್ ನೀಡಿ ಪಂಜಾಬ್'ನ ಪ್ಲೇ ಆಫ್ ಕನಸನ್ನು ಜೀವಂತ ಮಾಡಿಕೊಂಡು ತಂಡಕ್ಕೆ ಗೆಲುವನ್ನು ಉಡುಗೊರೆಯಾಗಿ ನೀಡಿದರು.

 

ಸ್ಕೋರ್ ವಿವರ

 

ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 230

 

ಮಾರ್ಟಿನ್ ಗಪ್ಟಿಲ್ ಸಿ ಪಾಂಡ್ಯ ಬಿ ಕರ್ಣ್ ಶರ್ಮಾ 36(18)

ವೃದ್ಧಿಮಾನ್ ಸಾಹ ಅಜೇಯ 93(55)

ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಬುಮ್ರಾ 47(21)

ಶಾನ್ ಮಾರ್ಶ್ ಸಿ ಪಾರ್ಥೀವ್ ಬಿ ಮೆಕ್ಲೆನಘಾನ್ 25(16)

ಅಕ್ಷರ್ ಪಟೇಲ್ ಅಜೇಯ 19(13)

 

ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 223

 

ಲಿಂಡ್ಲ್ ಸಿಮೊನ್ಸ್ ಸಿ ಗಪ್ಟಿಲ್ ಬಿ ಮ್ಯಾಕ್ಸ್‌ವೆಲ್ 59(32)

ಪಾರ್ಥೀವ್ ಪಟೇಲ್ ಸಿ ವೋಹ್ರಾ ಬಿ ಮೋಹಿತ್ 38(23)

ನಿತೀಶ್ ರಾಣಾ ಸಿ ಗಪ್ಟಿಲ್ ಬಿ ಪಾರ್ಥೀವ್ 12(12)

ರೋಹಿತ್ ಶರ್ಮಾ ಸಿ ಗಪ್ಟಿಲ್ ಬಿ ಟೆವಾಟಿಯಾ 05(07)

ಕೀರಾನ್ ಪೊಲಾರ್ಡ್ ಅಜೇಯ 50(24)

ಹಾರ್ದಿಕ್ ಪಾಂಡ್ಯ ಸಿ ಸಾಹ ಬಿ ಸಂದೀಪ್ ಶರ್ಮಾ 30(13)

ಕರ್ಣ್ ಶರ್ಮಾ ಬಿ ಮೋಹಿತ್ ಶರ್ಮಾ 19(06)

ಹರ್ಭಜನ್ ಸಿಂಗ್ ಅಜೇಯ 02(04)

ಪಂದ್ಯ ಶ್ರೇಷ್ಠ: ವೃದ್ಧಿಮಾನ್ ಸಾಹ

Follow Us:
Download App:
  • android
  • ios