ಬಾರ್ಸಿಲೋನಾ ಪರ 500 ಗೋಲುಗಳಿಸಿದ ಖ್ಯಾತಿಯನ್ನೂ ಮೆಸ್ಸಿ ತಮ್ಮದಾಗಿಸಿಕೊಂಡಿದ್ದಾರೆ.

ಮ್ಯಾಡ್ರಿಡ್(ಏ.24): ಅರ್ಜೆಂಟೀನಾದ ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿ ಅದ್ಬುತ ಗೋಲು ಬಾರಿಸುವ ಮೂಲಕ ರಿಯಲ್ ಮ್ಯಾಡ್ರಿಡ್ ವಿರುದ್ಧ ಬಾರ್ಸಿಲೋನಾ ತಂಡಕ್ಕೆ 3-2 ಗೋಲುಗಳ ಸ್ಮರಣೀಯ ಜಯ ದೊರಕಿಸಿಕೊಟ್ಟಿದ್ದಾರೆ.

ಇದರೊಂದಿಗೆ ಬಾರ್ಸಿಲೋನಾ ಪರ 500 ಗೋಲುಗಳಿಸಿದ ಖ್ಯಾತಿಯನ್ನೂ ಮೆಸ್ಸಿ ತಮ್ಮದಾಗಿಸಿಕೊಂಡಿದ್ದಾರೆ.

ರಿಯಲ್ ಮ್ಯಾಡ್ರಿಡ್ ವಿರುದ್ಧದ ಈ ಗೆಲುವಿನಿಂದಾಗಿ ಸತತ 3ನೇ ಬಾರಿ ಲಾ ಲೀಗ್ ಗೆಲ್ಲುವ ಬಾರ್ಸಿಲೋನಾ ಕನಸಿಗೆ ಮತ್ತಷ್ಟು ರೆಕ್ಕೆ ಬಂದಿದೆ.