ಮೆಲ್ಬರ್ನ್‌[ಡಿ.22]: ಡಿ.26ರಿಂದ ಆರಂಭಗೊಳ್ಳಲಿರುವ ಆಸ್ಪ್ರೇಲಿಯಾ ವಿರುದ್ಧ 3ನೇ ಟೆಸ್ಟ್‌ನಲ್ಲಿ ಭಾರತ ತಂಡ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯರನ್ನು ಕಣಕ್ಕಿಳಿಸಬೇಕು ಎಂದು ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್‌ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ. 

ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಕಿಂಗ್ ಕೊಹ್ಲಿ ನಂ.1

‘ಮೆಲ್ಬರ್ನ್‌ನಲ್ಲಿ ವಾತಾವರಣ, ಪರ್ತ್’ಗಿಂತ ಸಂಪೂರ್ಣ ವಿಭಿನ್ನವಾಗಿ ಇರಲಿದೆ. ಭಾರತೀಯ ವೇಗಿಗಳು ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಹಾರ್ದಿಕ್‌ ಪಾಂಡ್ಯರನ್ನು ಆಡಿಸುವ ಮೂಲಕ ಭಾರತ ತಂಡ ಸಮತೋಲನ ಕಂಡುಕೊಳ್ಳಲಿದೆ. ಅವರೊಬ್ಬ ಸಮರ್ಥ ಆಲ್ರೌಂಡರ್‌. ಎಂಸಿಜಿ ಪಿಚ್‌, ಪಾಂಡ್ಯ ಬೌಲಿಂಗ್‌ ಶೈಲಿಗೆ ಸೂಕ್ತವೆನಿಸಿದೆ’ ಎಂದು ಹಸ್ಸಿ ಹೇಳಿದ್ದಾರೆ.

#INDvAUS ಕೊನೆಯ 2 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ!

ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಮೊದಲೆರಡು ಟೆಸ್ಟ್’ಗಳಲ್ಲಿ ಉಭಯ ತಂಡಗಳು 1-1 ರ ಸಮಬಲ ಸಾಧಿಸಿದ್ದು, ಮೆಲ್ಬರ್ನ್ ಟೆಸ್ಟ್’ನಲ್ಲಿ ಮುನ್ನಡೆ ಸಾಧಿಸಲು ಎರಡು ತಂಡಗಳು ತುದಿಗಾಲಿನಲ್ಲಿ ನಿಂತಿವೆ.