ಈಗಿನ ಕಾಲದ ಆಟಗಾರರು ಸಮಾಜದಲ್ಲಿ ತಮ್ಮ ಪಾತ್ರ ಏನೆನ್ನುವುದನ್ನು ಅರಿತು ವರ್ತಿಸುತ್ತಿದ್ದಾರೆ. ತಮ್ಮ ಕ್ರೀಡಾ ಪ್ರದರ್ಶನ ಹಾಗೂ ವರ್ತನೆಯಿಂದ ಕಿರಿಯರಿಗೆ ಮಾದರಿಯಾಗುತ್ತಿದ್ದಾರೆ ಎಂದು ಎಂಸಿಸಿಯ ಅಧ್ಯಕ್ಷ ಮೈಕ್ ಬ್ರೇರ್ಲಿ ಹೇಳಿದ್ದಾರೆ.
ಮುಂಬೈ(ಡಿ.09): ಶೀಘ್ರದಲ್ಲೇ ಹಾಕಿ, ಫುಟ್ಬಾಲ್'ಗಳಲ್ಲಿರುವಂತೆ ಮೈದಾನದಲ್ಲಿ ಅಶಿಸ್ತು ಪ್ರದರ್ಶಿಸುವ ಕ್ರಿಕೆಟಿಗರನ್ನು ‘ಕೆಂಪು ಕಾರ್ಡ್’ ತೋರುವ ಮೂಲಕ ಮೈದಾನದಿಂದ ಆಚೆಗಟ್ಟುವ ಪದ್ಧತಿ ಜಾರಿಗೆ ಬರಲಿದೆ.
ಕ್ರಿಕೆಟ್ ನೀತಿ ನಿಯಮಾವಳಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ (ಐಸಿಸಿ) ಶಿಫಾರಸು ಮಾಡುವ ಮೆರಿಲಿಬೊರ್ನ್ ಕ್ರಿಕೆಟ್ ಕ್ಲಬ್‌ನ (ಎಂಸಿಸಿ) ಕಾರ್ಯಕಾರಿಣಿಯು ಇತ್ತೀಚೆಗೆ ನಡೆದಿದ್ದು ಅಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈಗಿನ ಕಾಲದ ಆಟಗಾರರು ಸಮಾಜದಲ್ಲಿ ತಮ್ಮ ಪಾತ್ರ ಏನೆನ್ನುವುದನ್ನು ಅರಿತು ವರ್ತಿಸುತ್ತಿದ್ದಾರೆ. ತಮ್ಮ ಕ್ರೀಡಾ ಪ್ರದರ್ಶನ ಹಾಗೂ ವರ್ತನೆಯಿಂದ ಕಿರಿಯರಿಗೆ ಮಾದರಿಯಾಗುತ್ತಿದ್ದಾರೆ ಎಂದು ಎಂಸಿಸಿಯ ಅಧ್ಯಕ್ಷ ಮೈಕ್ ಬ್ರೇರ್ಲಿ ಹೇಳಿದ್ದಾರೆ.
ಅಂಪೈರ್'ಗೆ ಬೆದರಿಕೆ ಹಾಕುವುದು, ಅಂಪೈರ್, ಪ್ರೇಕ್ಷಕ ಅಥವಾ ಮತ್ತೊಬ್ಬ ಆಟಗಾರನ ಮೇಲಿನ ಹಲ್ಲೆ ಮಾಡುವುದು ಸೇರಿದಂತೆ ಮತ್ಯಾವುದೇ ಗಂಭೀರ ನಡವಳಿಕೆ ವಿರುದ್ಧ ರೆಡ್ ಕಾರ್ಡ್ ಕ್ರಮ ಕೈಗೊಳ್ಳಬಹುದಾಗಿದೆ.