ರಿಯೊ ಒಲಿಂಪಿಕ್ಸ್‌ನಿಂದ ಮರಳಿದ ಬೆನ್ನಲ್ಲೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೈನಾ, ಇದೀಗ ಫಿಸಿಯೋ ಹೀತ್ ಮ್ಯಾಥ್ಯೂಸ್ ಅವರ ಬಳಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ.

ನವದೆಹಲಿ(ನ.02): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ವೃತ್ತಿಜೀವನ ಅಂತ್ಯಗೊಳ್ಳುತ್ತಿದೆಯೆಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

ರಿಯೊ ಒಲಿಂಪಿಕ್ಸ್‌ನಿಂದ ಮರಳಿದ ಬೆನ್ನಲ್ಲೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೈನಾ, ಇದೀಗ ಫಿಸಿಯೋ ಹೀತ್ ಮ್ಯಾಥ್ಯೂಸ್ ಅವರ ಬಳಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘‘ಫಿಟ್ನೆಸ್ ಮರಳಿ ಪಡೆಯುವ ಯತ್ನದಲ್ಲಿದ್ದೇನೆ. ಈಗಾಗಲೇ ಕೆಲವರು ನನ್ನ ವೃತ್ತಿಜೀವನ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ ಎಂದಿದ್ದಾರೆ. ನನ್ನ ಅಂತರಾತ್ಮವೂ ಹಾಗೇ ಹೇಳುತ್ತಿದೆ. ಈ ಹಿಂದೆ ಮಾಡುತ್ತಿದ್ದಂತೆ ಮುಂದಿನ ಐದಾರು ವರ್ಷಗಳ ಯೋಜನೆ ಮಾಡಲಾರೆ. ಇನ್ನೊಂದು ವರ್ಷಕ್ಕೆ ಯೋಜನೆ ರೂಪಿಸಬಲ್ಲೆನಷ್ಟೆ’’ ಎಂದು ಹೇಳಿದ್ದಾರೆ.