ಅಂತಿಮವಾಗಿ ಕರ್ನಾಟಕ 7 ವಿಕೆಟ್ ಕಳೆದುಕೊಂಡು ಅಜೇಯವಾಗಿ ಕ್ವಾರ್ಟರ್ ಫೈನಲ್ ತಲುಪಿತು.
ಕೋಲ್ಕತ(ಮಾ.06): ಮಯಾಂಕ ಅಗರ್ವಾಲ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಜೇಯವಾಗಿ ಕ್ವಾರ್ಟರ್'ಫೈನಲ್ ಪ್ರವೇಶಿಸಿದೆ.
ಇಲ್ಲಿನ ಜಾಧವಪುರ ವಿವಿ ಮೈದಾನದಲ್ಲಿ ನಡೆದ ಡಿ ಗುಂಪಿನ ಪಂದ್ಯಾವಳಿಯಲ್ಲಿ ಛತ್ತೀಸ್'ಗಡ ವಿರುದ್ಧ 3 ವಿಕೆಟ್'ಗಳ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಛತ್ತೀಸ್'ಗಡ ತಂಡ ಕೇವಲ 199 ರನ್'ಗಳಿಗೆ ಸರ್ವಪತನ ಕಂಡಿತು. ಛತ್ತೀಸ್'ಗಡ ಪರ ಅಭಿಮನ್ಯು ರವೀಂದ್ರಪಾಲ್ ಸಿಂಗ್ ಚೌಹ್ಹಾಣ್ (58) ಮತ್ತು ನಾಯಕ ಮೊಹಮ್ಮದ್ ಕೈಫ್ 43 ರನ್ ಬಾರಿಸಿ ಸವಾಲಿನ ಮೊತ್ತವನ್ನೇ ಪೇರಿಸಿದರು. ಕರ್ನಾಟಕ ಪರ ಶಿಸ್ತಿನ ದಾಳಿ ನಡೆಸಿದ ವಿನಯ್ ಕುಮಾರ್ 3 ವಿಕೆಟ್ ಪಡೆದರೆ, ಪ್ರಸಿದ್ ಕ್ರಿಷ್ಣ ಎರಡು ವಿಕೆಟ್ ಪಡೆದರು. ಇನ್ನು ಬಿನ್ನಿ, ಮೋರೆ, ಗೌತಮ್ ಹಾಗೂ ಶ್ರೇಯಸ್ ತಲಾ ಒಂದು ವಿಕೆಟ್ ಪಡೆದರು.
ಸವಾಲಿನ ಮೊತ್ತ ಬೆನ್ನತ್ತಿದ ಕರ್ನಾಟಕ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ 51 ರನ್ ಕಲೆಹಾಕಿದ ತಂಡ. ಆನಂತರ ಉತ್ತಪ್ಪ ಅವರನ್ನು ಕಳೆದುಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಅಗರ್'ವಾಲ್'ಗೆ ಉತ್ತಮ ಸಾಥ್ ನೀಡಿದರು.
ಅಂತಿಮವಾಗಿ ಕರ್ನಾಟಕ 7 ವಿಕೆಟ್ ಕಳೆದುಕೊಂಡು ಅಜೇಯವಾಗಿ ಕ್ವಾರ್ಟರ್ ಫೈನಲ್ ತಲುಪಿತು.
