ಮಹಾರಾಷ್ಟ್ರ ವಿರುದ್ಧ ಎರಡನೇ ದಿನವೇ ದ್ವಿಶತಕ ಸಿಡಿಸಿದ್ದ ಅಗರ್'ವಾಲ್ ನಿರೀಕ್ಷೆಯಂತೆಯೇ ಚೊಚ್ಚಲ ತ್ರಿಶತಕ ಸಿಡಿಸಿ ಸಂಭ್ರಮಿಸಿದರು.

ಪುಣೆ(ನ.03): ಮಯಾಂಕ್ ಅಗರ್'ವಾಲ್ ಬಾರಿಸಿದ ಚೊಚ್ಚಲ ತ್ರಿಶತಕ(304*) ಹಾಗೂ ಕರುಣ್ ನಾಯರ್(116) ಭರ್ಜರಿ ಶತಕದ ನೆರವಿನಿಂದ ಕರ್ನಾಟಕ 5 ವಿಕೆಟ್ ಕಳೆದುಕೊಂಡು 628 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದ್ದು, ಮೊದಲ ಇನಿಂಗ್ಸ್'ನಲ್ಲಿ ವಿನಯ್ ಕುಮಾರ್ ಪಡೆ 383 ರನ್'ಗಳ ಮುನ್ನಡೆ ಸಾಧಿಸಿದೆ.

ಮಹಾರಾಷ್ಟ್ರ ವಿರುದ್ಧ ಎರಡನೇ ದಿನವೇ ದ್ವಿಶತಕ ಸಿಡಿಸಿದ್ದ ಅಗರ್'ವಾಲ್ ನಿರೀಕ್ಷೆಯಂತೆಯೇ ಚೊಚ್ಚಲ ತ್ರಿಶತಕ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ತ್ರಿಶತಕ ಸಿಡಿಸಿದ ಮೂರನೇ ಬ್ಯಾಟ್ಸ್'ಮನ್ ಎನ್ನುವ ಕೀರ್ತಿಗೂ ಮಯಾಂಕ್ ಪಾತ್ರವಾಗಿದ್ದಾರೆ. ಈ ಮೊದಲು ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಕರ್ನಾಟಕ ಪರ ತ್ರಿಶತಕ ಸಿಡಿಸಿದ್ದರು.

ಇನ್ನೂ ಭರ್ಜರಿ ಫಾರ್ಮ್'ನಲ್ಲಿರುವ ಕರುಣ್ ನಾಯರ್ ಆಕರ್ಷಕ ಶತಕ ಸಿಡಿಸುವ ಮೂಲಕ ಮಯಾಂಕ್ ಅಗರ್'ವಾಲ್'ಗೆ ಉತ್ತಮ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್:

ಮಹಾರಾಷ್ಟ್ರ ಮೊದಲ ಇನಿಂಗ್ಸ್: 245/10

ಕರ್ನಾಟಕ ಮೊದಲ ಇನಿಂಗ್ಸ್: 628/5 ಡಿಕ್ಲೇರ್

ಮಯಾಂಕ್ ಅಗರ್'ವಾಲ್: 304*

ಕರುಣ್ ನಾಯರ್: 116