ಯುಎನ್‌'ಡಿಪಿ ಶರಪೋವಾ ಅವರನ್ನು 2007ರ ಫೆಬ್ರವರಿಯಲ್ಲಿ ಗುಡ್‌'ವಿಲ್ ರಾಯಭಾರಿಯಾಗಿ ನೇಮಿಸಲಾಗಿತ್ತು. ಉದ್ದೀಪನಾ ಪ್ರಕರಣದ ನಂತರ ಮಾರ್ಚ್‌ನಲ್ಲಿ ರಾಯಭಾರತ್ವದಿಂದ ತೆಗೆದುಹಾಕಿತ್ತು.ಮುಂದಿನ 2017ರ ಏಪ್ರಿಲ್‌'ವರೆಗೂ ಶರಪೋವಾ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಲಂಡನ್(ನ.11): ರಷ್ಯಾದ ಸ್ಟಾರ್ ಟೆನಿಸ್ ತಾರೆ ಮರಿಯಾ ಶರಪೋವಾ, ವಿಶ್ವ ಸಂಸ್ಥೆಯ ಗುಡ್'ವಿಲ್ ರಾಯಭಾರಿಯಾಗಿ ಮರು ನೇಮಕಗೊಂಡಿದ್ದಾರೆ.
ಶರಪೋವಾ ಪ್ರಸಕ್ತ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯನ ಓಪನ್ ಟೆನಿಸ್ ಟೂರ್ನಿಯ ವೇಳೆಯಲ್ಲಿ ಮೆಲ್ಡೋನಿಯಂ ಎಂಬ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಆರಂಭದಲ್ಲಿ ಶರಪೋವಾ ಅವರಿಗೆ 2 ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ಕಳೆದ ತಿಂಗಳು ಶರಪೋವಾ ಶಿಕ್ಷೆಯ ಪ್ರಮಾಣವನ್ನು 15 ತಿಂಗಳಿಗೆ ಇಳಿಸಲಾಯಿತು. ಹೀಗಾಗಿ ಮುಂದಿನ ಏಪ್ರಿಲ್ ವೇಳೆಗೆ ಶರಪೋವಾ ಅವರ ಶಿಕ್ಷೆ ಮುಕ್ತಾಯವಾಗಲಿದೆ.
ಯುಎನ್'ಡಿಪಿ ಶರಪೋವಾ ಅವರನ್ನು 2007ರ ಫೆಬ್ರವರಿಯಲ್ಲಿ ಗುಡ್'ವಿಲ್ ರಾಯಭಾರಿಯಾಗಿ ನೇಮಿಸಲಾಗಿತ್ತು. ಉದ್ದೀಪನಾ ಪ್ರಕರಣದ ನಂತರ ಮಾರ್ಚ್ನಲ್ಲಿ ರಾಯಭಾರತ್ವದಿಂದ ತೆಗೆದುಹಾಕಿತ್ತು.
ಮುಂದಿನ 2017ರ ಏಪ್ರಿಲ್'ವರೆಗೂ ಶರಪೋವಾ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
