ಇದರೊಂದಿಗೆ ಭಾರತ ಒಟ್ಟು 9 ಪದಕ ಗೆದ್ದಂತಾಗಿದೆ. ಬಾಕ್ಸಿಂಗ್ ವಿಭಾಗದಲ್ಲಿ ಮೇರಿ ಕೋಮ್ ಕೂಡ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಗೋಲ್ಡ್'ಕೋಸ್ಟ್(ಏ.08):  ಕಾಮನ್​ವೆಲ್ತ್​ ನ ಕ್ರೀಡಾಕೂಟದಲ್ಲಿ 4ನೇ ದಿನವಾದ ಇಂದು ಭಾರತ ಪದಕ ಬೇಟೆ ಮುಂದುವರಿಸಿದೆ. ವೇಟ್'ಲಿಫ್ಟಿಂಗ್'ನ 69 ಕೆಜಿ ವಿಭಾಗದಲ್ಲಿ ಪೂನಮ್ ಯಾದವ್ ಚಿನ್ನ, 10 ಮಿಟರ್ ಏರ್ ಪಿಸ್ತೂಲ್'ನಲ್ಲಿ ಮನುಬಾಕರ್ ಚಿನ್ನ ಹಾಗೂ ಹೀನಾ ಸಿಂಧು ಬೆಳ್ಳಿ ಪದಕ ಗೆದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರೊಂದಿಗೆ ಭಾರತ ಒಟ್ಟು 9 ಪದಕ ಗೆದ್ದಂತಾಗಿದೆ. ಬಾಕ್ಸಿಂಗ್ ವಿಭಾಗದಲ್ಲಿ ಮೇರಿ ಕೋಮ್ ಕೂಡ ಸೆಮಿಫೈನಲ್ ಪ್ರವೇಶಿಸಿದ್ದಾರೆ. 77 ಕೆಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಸತೀಶ್ ಕುಮಾರ್ ಶಿವಲಿಂಗಂ,ಕೆ.ಎಲ್.ರಾಹುಲ್,ಮೀರಾಬಾಯ್ ಚಾನೂ ಹಾಗೂ 2ನೇ ದಿನ ಸಂಜಿತಾ ಜಾನು ಚಿನ್ನ ಜಯಗಳಿಸಿದ್ದರು. ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, 6 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚು ಪದಕ ಮುಡಿಗೇರಿಸಿಕೊಂಡಿದೆ.