ನಿನ್ನೆಯ ಪುಣೆ ವಿರುದ್ಧದ ಪಂದ್ಯದಲ್ಲಿ KKR ತಂಡದ ಕನ್ನಡಿಗ ಮನೀಶ್​​ ಪಾಂಡೆ ಮೈದಾನದಲ್ಲಿ ಕನ್ನಡದ ಕಂಪು ಸುರಿಸಿದ್ದಾರೆ. ಅಷ್ಟೇ ಅಲ್ಲ ಜಿಂಬಾಬ್ವೆಯ ಕಾಮೆಂಟೇಟರ್​​​ ಪೊಮಿ ಮಬಾಂಗ್ವೆ ಬಾಯಲ್ಲೂ ಕನ್ನಡವನ್ನು ಮಾತನ್ನಾಡಿಸಿದ್ದಾರೆ.

ಪುಣೆ(ಎ.27): ನಿನ್ನೆಯ ಪುಣೆ ವಿರುದ್ಧದ ಪಂದ್ಯದಲ್ಲಿ KKR ತಂಡದ ಕನ್ನಡಿಗ ಮನೀಶ್​​ ಪಾಂಡೆ ಮೈದಾನದಲ್ಲಿ ಕನ್ನಡದ ಕಂಪು ಸುರಿಸಿದ್ದಾರೆ. ಅಷ್ಟೇ ಅಲ್ಲ ಜಿಂಬಾಬ್ವೆಯ ಕಾಮೆಂಟೇಟರ್​​​ ಪೊಮಿ ಮಬಾಂಗ್ವೆ ಬಾಯಲ್ಲೂ ಕನ್ನಡವನ್ನು ಮಾತನ್ನಾಡಿಸಿದ್ದಾರೆ.

KKR ಫೀಲ್ಡಿಂಗ್​​ ಮಾಡುತ್ತಿದ್ದ ವೇಳೆ ಮನೀಶ್​​, ರಾಬಿನ್​ ಉತ್ತಪ್ಪರ ಜೊತೆ ಕನ್ನಡದಲ್ಲಿ ಎದುರಾಳಿ ಬ್ಯಾಟ್ಸ್​ಮನ್​'ನ ವೀಕ್ನೆಸ್​​​ ಬಗ್ಗೆ ಮಾತನ್ನಾಡಿಕೊಂಡರು. ಈ ವೇಳೆ ಮನೀಶ್​​ ಕಾಮೆಂಟೇಟರ್​​ ಬಳಿ ಮಾತನ್ನಾಡಲು ಮೈಕ್​​ ಧರಿಸಿದ್ದರು. ಹೀಗಾಗಿ ಮನೀಶ್​​​ ಕನ್ನಡವನ್ನ ಕಾಮೆಂಟೇಟರ್​​​ ಪಾಮಿ ಮಗಾಂಬ್ವ ಕೇಳಿಸಿಕೊಂಡು ದಂಗಾದ್ರು. ನಂತರ ಮನೀಶ್​​​ ಬಳಿ ತಾವೂ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದರು.