ಸಿಂಧುಗಿಂತಲೂ ಮಿಗಿಲು, ಭಾರತಾಂಬೆಗೆ ಚಿನ್ನ ತೊಡಿಸಿದ ಮಾನಸಿ ಜೋಶಿ ಸಾಧನೆ!
ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದು ಇತಿಹಾಸ ಬರೆದಿದ್ದಾರೆ. ಇದರ ಬೆನ್ನಲ್ಲೇ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಾನಸಿ ಜೋಶಿ ಚಿನ್ನದ ಪದಕ ಮುಡಿಗೇರಿಸಿಕೊಂಡಳು. ಅಪಘಾತದಲ್ಲಿ ಕಾಲು ಕಳೆದುಕೊಂಡ ಮಾನಸಿ ಜೋಶಿಯ ಸಾಧನೆ ಸಿಂಧುಗಿಂತಲೂ ಮಿಗಿಲು. ಮಾನಸಿ ಸಾಧನೆಯ ಹಾದಿ ಇಲ್ಲಿದೆ.
ಬೆಂಗಳೂರು(ಆ.28): ಕ್ಷಮಿಸಿಬಿಡು ಮಾನಸಿ ನಿನ್ನ ಚಿನ್ನ ಕಂಡಿದ್ದು ತಡವಾಯಿತು, World Para Badminton Champion ಮಾನಸಿ ಜೋಷಿಯ ಬಗ್ಗೆ...ಎಡಗಾಲ ಮೂಳೆಯ ಕಟ್ಟಕಡೆಯ ತುಣುಕೂ ಪುಡಿಪುಡಿಯಾಗುವಂತೆ ಮಾಡಿದ ಆ ಟ್ರಕ್ ಆಕ್ಸಿಡೆಂಟ್‌ಗೆ ಜೀವನ ಪೂರ್ತಿ ಶಾಪ ಹಾಕುತ್ತ ನಿನ್ನ ಬಗ್ಗೆ ಬರೆಯಲು ಕೂತೆ.
ಅದು 2011 December 2. ಈ ಜನ್ಮದ ಅವಳ ಅತ್ಯಂತ ಕೆಟ್ಟ ದಿನ. ದುರದೃಷ್ಟವನ್ನೇ ಗಾಡಿ ಪೂರ್ತಿ ತುಂಬಿಕೊಂಡಿದ್ದ ಆ ಟ್ರಕ್ ರಸ್ತೆ ಪೂರ್ತಿ ರಕ್ತವಾಗುವಂತೆ ಅವಳ ಮೇಲೆ ಹರಿದಿತ್ತು. ಅವಳ ವಯಸ್ಸು ಆಗ just 22. ಡಾಕ್ಟರ್ ಗಳಿಗೆ infect ಆಗಿದ್ದ ಇವಳ ಎಡಗಾಲನ್ನ ಕತ್ತರಿಸುವುದು ಬಿಟ್ಟು ಇನ್ನೇನೂ ಉಳಿದಿರಲಿಲ್ಲ.
ಇದನ್ನೂ ಓದಿ: ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!
45 ದಿನಗಳ ಜೀವಂತ ನರಕವನ್ನ ಕುಳಿತೇ ನೋಡಿದ್ದಳು. ಕನಸುಗಳಿರಲಿಲ್ಲವಾ ಆ ವಯಸ್ಸಿಗೆ? ಅವಳದ್ದು ಶುದ್ಧ ಮುಂಬೈ ಹುಡುಗಿಯ ಲೈಫ್. ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ನಲ್ಲಿ ಪದವಿ. Atos India ದಲ್ಲಿ ಸೀನಿಯರ್ Software Engineer.ಎಲ್ಲರಂತೆ ಕೈತುಂಬ ಸಂಬಳ. ಒಂದು ಐಶಾರಾಮಿ ಕಾರು ಕೊಂಡುಕೊಳ್ಳುವ ಸಣ್ಣ ಆಸೆ. ಆದರೆ ವಿಧಿ ಅವಳಿಗೆಂದೇ ಮಾಡಿದ್ದ ಕೊಳ್ಳಿ ಎಲ್ಲವನ್ನ ಬೂದಿ ಮಾಡಿತ್ತು. ಮಾಡಿತ್ತಾ? ಗೊತ್ತಿಲ್ಲ.
ಡಿಸ್ಟ್ರಿಕ್ಟ್ ಲೆವೆಲ್ ಪಂದ್ಯಗಳಲ್ಲಿ ಕಂಪನಿ ಪರ ಆಡಿದ್ದ ಹುಡುಗಿ ಮಾನಸಿ ಜೋಷಿ. Prosthetic leg ನೊಂದಿಗೆ ಅಪಘಾತವಾದ ಎಂಟೇ ತಿಂಗಳಿಗೆ ಅಂಕಣಕ್ಕಿಳಿದು ಬಿಟ್ಟಿರುತ್ತಾಳೆ. 2014 agustಗೆ ಮಹಾರಾಷ್ಟ್ರದ ಪರ Asian games trials ಗೆ ಆಡುತ್ತಾಳೆ. ಸೆಲೆಕ್ಟ್ ಆಗಲ್ಲ.ಆದರೆ ಅನುಭವ ಸಿಕ್ಕಿತ್ತು, ಕಾಲಿಲ್ಲದೆಯೇ ಓಡುತ್ತಿರುವವರ ಬದುಕು ಕಂಡಿತ್ತು.
ಅವನು ಸಿಕ್ಕಿದ್ದ ನೀರಜ್ ಜಾರ್ಜ್
ಹೆಸರೇ ಸಾಕು. ಆತ್ಮವಿಶ್ವಾಸದ ಬುಗ್ಗೆಯಂತಹವನು. ಮಾನಸಿ ಜೋಷಿಯಲ್ಲಿದ್ದ ಚಾಂಪಿಯನ್‌ಳನ್ನ ಎಂದೂ ಕೂರಲು ಬಿಡದವನು. ನಿನ್ನ ಸ್ಕಿಲ್‌ಗೆ ನೀನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಬೇಕೆಂದಿದ್ದ. 2014 ರ ಡಿಸೆಂಬರ್ ಗೆ ನ್ಯಾಷನಲ್ ಲೆವೆಲ್ ಟೂರ್ನಿಯಲ್ಲಿ ಮಾನಸಿ ಕೊರಳಲ್ಲಿ ಬೆಳ್ಳಿ ಹಾರ. ಮುಂದೆ ಅರ್ಜುನ ಅವಾರ್ಡಿ ಪಾರುಲ್ ಪಾರ್ಮಾರ್ ವಿರುದ್ಧ ಆಡುವ ಅವಕಾಶ ಮಾನಸಿ ಪಾಲಿಗೆ ಸ್ವರ್ಗ.
ಅಸಲಿಗೆ ಮಾನಸಿಗೆ ಕೋಚ್ ಇರಲೇ ಇಲ್ಲ.
ಆರು ವರ್ಷದವಳಿದ್ದಾಗ ಅಪ್ಪ ಷಟಲ್ ಅನ್ನ ಗಾಳಿಯಲ್ಲಿ ತೇಲಿ ಬಿಟ್ಟರೆ ಮುದ್ದು ಕೈಗಳಿಂದ ರಾಕೆಟ್ ಹಿಡಿದು ಹೊಡೆದಿದ್ದೇ ಮೊದಲ ಕಲಿಕೆ..ಕಾಲು ಕಳೆದುಕೊಂಡಾಗ ಅಪ್ಪನಂತ ಸೋದರ ಬ್ಯಾಡ್ಮಿಂಟನ್ ಟ್ರಿಕ್ಸ್ ಹೇಳಿಕೊಟ್ಟ. ಮುಂದಿನದನ್ನ ನೋಡಿಕೊಂಡವನು ಒನ್ಸ್ ಅಗೈನ್ ಪುಲ್ಲೇಲ ಗೋಪಿಚಂದ್. ಬ್ಯಾಡ್ಮಿಂಟನ್ ಜಗದ ಸೂಪರ್ ಮ್ಯಾನ್.
Prosthetic Leg ತುಂಬ ಹೆವಿ ಮತ್ತು ಬಿಗಿ. ಇದೇ ಕಾರಣಕ್ಕೆ ಮಾನಸಿ ಸೋತ ಮ್ಯಾಚ್ ಗಳೆಷ್ಟೋ. ಈಗ Prosthesis Socket ಬಳಸುತ್ತಾಳೆ. ಇದು ತುಂಬ ಲೈಟ್ ಮತ್ತು ಕಂಫರ್ಟೆಬಲ್. ಗೋಪಿಚಂದ್ ಅಕಾಡೆಮಿಯಲ್ಲಿ ಅವಳು ಮಾಡಿದ ವರ್ಕೌಟ್ ಇತ್ತಲ್ಲ. ಅದು ಚಾಂಪಿಯನ್‌ಗಳಿಗೆ ಮಾತ್ರ ಸಾಧ್ಯವಾಗುವಂತ ಸಾಧನೆ..she lost her weight and improved her muscle strength. Simply marvelous..
ಸ್ಟ್ರೋಕ್ ಕರೆಕ್ಷನ್ ಅನ್ನ ಪುಲ್ಲೇಲ ನಿಂತು ಮಾಡಿದ್ದ. ಚಾಂಪಿಯನ್‌ಗಳ ದೇವರು!
ಇವತ್ತಿಗೂ ಮಾನಸಿ ಏಳುವುದು ಬೆಳಿಗ್ಗೆ 4 ಗಂಟೆಗೆ. ಭಗವಂತ ಇವಳಿಗೆ ಮಾತ್ರ ಟೈಂ ಕೊಟ್ಟಿದ್ದಾನಾ? ಒಂದು ಆಶಾವಾದ ಅಷ್ಟೇ. ಹೀಗೆ ರೆಡಿಯಾದವಳಿಗೆ World Para Badminton championship title ಮ್ಯಾಚ್ ನಲ್ಲಿ ಎದುರಾಗಿದ್ದು ಮತ್ತದೇ ಪಾರುಲ್ ಪಾರ್ಮಾರ್. 46 ವರ್ಷ ಮಾಗಿದ ಬ್ಯಾಡ್ಮಿಂಟನ್ ಪಟು . ಇದೇ ವರ್ಷ ಪಾರ್ಮಾರ್ ವಿರುದ್ಧ ಮಾನಸಿ ಎಣಿಸಿಕೊಂಡು ಸೋತಿರುತ್ತಾಳೆ. ಆದರೆ ಚಾಂಪಿಯನ್ ಷಿಪ್ ಮೇಲೆ ಮಾನಸಿ ಹೆಸರು ಬರೆದಿರುತ್ತದೆ. 21-12, 21-7 ರಲ್ಲಿ ಪಾರ್ಮಾರ್ ರನ್ನ ನಿಲ್ಲಿಸಿ ಗೆದ್ದು ಬಿಡುತ್ತಾಳೆ.
ಅವಳು ಚಾಂಪಿಯನ್ನಾ...ಅವಳ ಆಶಾವಾದ ಚಾಂಪಿಯನ್ನಾ..ನಿಮಗೆ ಬಿಡುತ್ತೇನೆ...ಸಿಂಧೂಗಿಂತ ಇವಳ ಸಾಧನೆ ಒಂದು ಹಿಡಿ ಜಾಸ್ತಿ. ಅನುಕಂಪಕ್ಕಲ್ಲ, ನೆನಪಿರಲಿ. ನಿನ್ನಲ್ಲಿ ಉತ್ಸಾಹ ಎಂದೂ ಬತ್ತದಂತೆ ನೋಡಿಕೊಂಡ, ಬಾಬಾ ಅಟಾಮಿಕ್ ರೀಸರ್ಚ್ ನಲ್ಲಿ ಕೆಲಸ ಮಾಡಿರುವ ನಿನ್ನ ತಂದೆಯನ್ನ ನಾನಂತೂ ಮರೆಯಲ್ಲ.
ರಮಾಕಾಂತ್ ಆರ್ಯನ್,
ಆಸೋಸಿಯೇಟ್ ಎಡಿಟರ್, ಕರೆಂಟ್ ಅಫೈರ್ಸ್
ಸುವರ್ಣ ನ್ಯೂಸ್