ಶಮಿ ಪತ್ನಿಯಿಂದ ಮಮತಾ ಬ್ಯಾನರ್ಜಿ ಭೇಟಿ

First Published 22, Mar 2018, 11:59 AM IST
Mamata Banerjee Likely To Meet Mohammed Shami Wife In Domestic Violence Case
Highlights

ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ, ಜಹಾನ್‌'ಗೆ ದೂರವಾಣಿ ಮೂಲಕ ರಾಜ್ಯ ವಿಧಾನಸಭೆಯಲ್ಲಿ ಮಮತಾರನ್ನು ಭೇಟಿಯಾಗಲು ಸೂಚಿಸಲಾಗಿದೆ ಎನ್ನಲಾಗಿದೆ.

ಕೋಲ್ಕತಾ(ಮಾ.22): ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಕೊಲೆ ಯತ್ನ ಆರೋಪ ಮಾಡಿರುವ ಪತ್ನಿ ಹಸೀನ್ ಜಹಾನ್, ಶುಕ್ರವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ, ಜಹಾನ್‌'ಗೆ ದೂರವಾಣಿ ಮೂಲಕ ರಾಜ್ಯ ವಿಧಾನಸಭೆಯಲ್ಲಿ ಮಮತಾರನ್ನು ಭೇಟಿಯಾಗಲು ಸೂಚಿಸಲಾಗಿದೆ ಎನ್ನಲಾಗಿದೆ.

‘ಶುಕ್ರವಾರ ಮುಖ್ಯಮಂತ್ರಿಯನ್ನು ಭೇಟಿಯಾಗುವಂತೆ ಹಸೀನ್‌ಗೆ ತಿಳಿಸಲಾಗಿದೆ. ಒಬ್ಬರೇ ಬರುವಂತೆ ಸೂಚಿಸಲಾಗಿದ್ದು, ವಕೀಲರು ಇಲ್ಲವೇ ಕುಟಂಬ ಸದಸ್ಯರನ್ನು ಕರೆದುಕೊಂಡು ಬರದಂತೆ ತಿಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೋಮವಾರ ಹಸೀನ್, ಮಮತಾರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಬೇಕೆಂದು ಮನವಿ ಸಲ್ಲಿಸಿದ್ದರು.

loader