ಮಲೇಷ್ಯಾ ಓಪನ್: ಕ್ವಾರ್ಟರ್’ಗೆ ಲಗ್ಗೆಯಿಟ್ಟ ಸಿಂಧು, ಶ್ರೀಕಾಂತ್; ಸೈನಾಗೆ ಶಾಕ್..!

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಗುರುವಾರ ನಡೆದ ಪ್ರಿಕ್ವಾರ್ಟರ್‌ನಲ್ಲಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಶಿಪ್‌ನ ಬೆಳ್ಳಿ ವಿಜೇತೆ ಸಿಂಧು, 2ನೇ ಸುತ್ತಿನಲ್ಲಿ ಮಲೇಷ್ಯಾದ ಯಿಂಗ್ ಲೀ ಅವರನ್ನು 21-08, 21-14 ನೇರ ಗೇಮ್ ಗಳಿಂದ ಮಣಿಸಿ ಕ್ವಾರ್ಟರ್‌ಗೆ ಪ್ರವೇಶಿಸಿದರು. ಸಿಂಧು ಕ್ವಾರ್ಟರ್‌ನಲ್ಲಿ ವಿಶ್ವದ ನಂ.1 ಶಟ್ಲರ್ ಸ್ಪೇನ್‌ನ ಕರೋಲಿನಾ ಮರೀನ್‌ರನ್ನು ಎದುರಿಸಲಿದ್ದಾರೆ.

Malaysia Open Srikanth Sindhu in quarters Saina ousted

ಕೌಲಾಲಂಪುರ[ಜೂ.29]: ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತರಾದ ಕಿದಾಂಬಿ ಶ್ರೀಕಾಂತ್ ಮತ್ತು ಪಿ.ವಿ. ಸಿಂಧು, ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಪೈನಲ್ ಪ್ರವೇಶಿಸಿದ್ದಾರೆ. ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತೆ ಸೈನಾ ನೆಹ್ವಾಲ್ ನಿರಾಸೆ ಅನುಭವಿಸಿದರು.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಗುರುವಾರ ನಡೆದ ಪ್ರಿಕ್ವಾರ್ಟರ್‌ನಲ್ಲಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಶಿಪ್‌ನ ಬೆಳ್ಳಿ ವಿಜೇತೆ ಸಿಂಧು, 2ನೇ ಸುತ್ತಿನಲ್ಲಿ ಮಲೇಷ್ಯಾದ ಯಿಂಗ್ ಲೀ ಅವರನ್ನು 21-08, 21-14 ನೇರ ಗೇಮ್ ಗಳಿಂದ ಮಣಿಸಿ ಕ್ವಾರ್ಟರ್‌ಗೆ ಪ್ರವೇಶಿಸಿದರು. ಸಿಂಧು ಕ್ವಾರ್ಟರ್‌ನಲ್ಲಿ ವಿಶ್ವದ ನಂ.1 ಶಟ್ಲರ್ ಸ್ಪೇನ್‌ನ ಕರೋಲಿನಾ ಮರೀನ್‌ರನ್ನು ಎದುರಿಸಲಿದ್ದಾರೆ.

ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರ ನಡೆದರು. ಅವರು ವಿಶ್ವದ ನಂ.2 ಜಪಾನ್‌ನ ಅಕಾನೆ ಯಮಾಗುಚಿ ವಿರುದ್ಧ 15-21, 13-21 ಗೇಮ್‌ಗಳಿಂದ ಸೋಲುಂಡರು. 

ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್, ಚೈನೀಸ್ ತೈಪೆಯ ವಾಂಗ್ ಜು ವೀ ವಿರುದ್ಧ 20-22, 12-21 ನೇರ ಗೇಮ್‌ಗಳಿಂದ ಗೆಲುವು ಸಾಧಿಸಿದರು. ಇಬ್ಬರೂ 3 ಬಾರಿ ಮುಖಾಮುಖಿಯಾಗಿದ್ದು, ಈ ಗೆಲುವಿನೊಂದಿಗೆ ಶ್ರೀಕಾಂತ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಶ್ರೀಕಾಂತ್ ಕ್ವಾರ್ಟರ್‌ನಲ್ಲಿ ಫ್ರಾನ್ಸ್‌ನ ಬ್ರೈಸ್ ಲಿವರ್ಡೆಜ್ ಸವಾಲು ಎದುರಿಸಲಿದ್ದಾರೆ.

Latest Videos
Follow Us:
Download App:
  • android
  • ios