ಮಲೇಷಿಯಾ ಓಪನ್ 2018: ಆಯಾ ಒಹೊರಿ ವಿರುದ್ಧ ಪಿವಿ ಸಿಂಧೂಗೆ ಗೆಲುವು

First Published 27, Jun 2018, 6:33 PM IST
Malaysia Open: PV Sindhu Beats Aya Ohori in First Round
Highlights

ಮಲೇಷಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧೂ ಭಾರತೀಯರ ಪ್ರಶಸ್ತಿ ನಿರೀಕ್ಷೆಗಳನ್ನ ಇಮ್ಮಡಿಗೊಳಿಸಿದ್ದಾರೆ. ಜಪಾನ್ ಎದುರಾಳಿ ವಿರುದ್ಧ ಸಿಂಧು ಹೋರಾಟ ಹೇಗಿತ್ತು? ಇಲ್ಲಿದೆ ವಿವರ
 

ಕೌಲಲಾಂಪುರ್(ಜೂ.27): ಮಲೇಷಿಯಾ ಒಪನ್ ವರ್ಲ್ಡ್ ಟೂರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಿನಲ್ಲಿ ಜಪಾನ್ ಸ್ಪರ್ಧಿ ಆಯಾ ಒಹೋರಿ ವಿರುದ್ಧ 26-24, 21-15 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಫಿಟ್ನೆಸ್ ಕಾರಣದಿಂದ ಉಬರ್ ಕಬ್ ಫೈನಲ್ ಪಂದ್ಯದಿಂದ ಹೊರಗುಳಿದ ಪಿವಿ ಸಿಂಧೂ, ವಿಶ್ರಾಂತಿಗೆ ಜಾರಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡು ಕಣಕ್ಕಿಳಿದಿರುವ ಸಿಂಧು, ಮೊದಲ ಪಂದ್ಯದಲ್ಲೇ 14ನೇ ಶ್ರೇಯಾಂಕಿತ ಆಯಾ ಒಹೋರಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.

ಮೊದಲ ಸೆಟ್‌ನಲ್ಲಿ ಜಪಾನ್ ಸ್ಪರ್ಧಿಯಿಂದ ತೀವ್ರ ಸ್ಪರ್ಧೆ ಎದುರಿಸಿದ ಸಿಂಧು 26-24 ಅಂತರದಲ್ಲಿ ಗೆಲುವು ಸಾಧಿಸಿದರು. ಭರ್ಜರಿ ಮುನ್ನಡೆಯೊಂದಿಗೆ ದ್ವಿತೀಯ ಸೆಟ್‌ನಲ್ಲಿ ಸಿಂಧೂ 21-15 ಅಂತರದಲ್ಲಿ ಗೆಲುವು ಸಾಧಿಸಿದರು. 

loader