ಮುಂಬೈ (ಡಿ. 23): ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಡೆವೀಸ್​ ಕಪ್ ಟಿನಿಸ್​ ಟೂರ್ನಿಯ ಏಷ್ಯಾ ಒಸಿಯಾನಿಕ್​ ವಿಭಾಗದ ನ್ಯೂಜಿಲ್ಯಾಂಡ್​ ವಿರುದ್ಧದ ಟೈ ನಂತರ ಮಹೇಶ್ ಭೂಪತಿ ಭಾರತ ತಂಡದ ನಾಯಕನ್ನಾಗಿ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ನಿರ್ಧಾರಿಸಿದೆ.

ಸದ್ಯ ನಾಯಕನ್ನಾಗಿರುವ ಆನಂದ್​​​ ಅಮೃತ್​​​ರಾಜ್​​​ರನ್ನ ಫೆಬ್ರವರಿಯ ನ್ಯೂಜಿಲೆಂಡ್​​​ ವಿರುದ್ಧದ ಟೈವರೆಗೆ ಮುಂದುವರೆಸಲು ಅಸೋಸಿಯೇಷನ್ ನಿರ್ಧರಿಸಿದೆ. ಆನಂದ್​​​ ಅಮೃತ್​​​ರಾಜ್​​​ ನಾಯಕನ್ನಾಗಿದ್ದಾಗ ತಂಡದಲ್ಲಿ ಶಿಸ್ತು ಇರದಿದ್ದನ್ನ ಮನಗಂಡ ಭಾರತ ಟೆನಿಸ್​​​​ ಅಸೋಸಿಯೇಷನ್ ನಿನ್ನೆ ದೆಹಲಿಯಲ್ಲಿ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಮಹೇಶ್​​ ಭೂಪತಿ ಫೆಬ್ರವರಿ ನಂತರ ಡೆವೀಸ್​​​ ಕಪ್​​​ನ ಭಾರತದ ನಾಯಕನ್ನಾಗಿ ಅಧಿಕಾರ ಸ್ವಿಕರಿಸಲಿದ್ದಾರೆ.