ಲಂಕಾ ಕ್ರಿಕೆಟ್‌'ಗೆ ನೆರವು ನೀಡದ ಮಹೇಲಾ!

Mahela Jayawardene Snubs Desperate Cricket Selectors
Highlights

ಲಂಕಾ ಕ್ರಿಕೆಟ್ ಸಂಸ್ಥೆಯ ‘ವ್ಯವಸ್ಥೆ ಮೇಲೆ ವಿಶ್ವಾಸವಿಲ್ಲ’ ಎಂದು ಹೇಳಿರುವ ಲಂಕಾ ಮಾಜಿ ನಾಯಕ ಮಹೇಲಾ ಜಯವರ್ಧನೆ, ಗೆಲುವಿಗಾಗಿ ಪರಿತಪಿಸುತ್ತಿರುವ ರಾಷ್ಟ್ರೀಯ ತಂಡಕ್ಕೆ ಸಲಹೆ ನೀಡಲು ನಿರಾಕರಿಸಿದ್ದಾರೆ. 

ಕೊಲಂಬೊ(ಜೂ.16]: ಹಣಕಾಸು ಅವ್ಯವಹಾರ, ಪಿಚ್ ಫಿಕ್ಸಿಂಗ್ ಆರೋಪ ಹೀಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಹಿನ್ನಡೆಯುಂಟಾಗಿದೆ. ಲಂಕಾ ಕ್ರಿಕೆಟ್ ಸಂಸ್ಥೆಯ ‘ವ್ಯವಸ್ಥೆ ಮೇಲೆ ವಿಶ್ವಾಸವಿಲ್ಲ’ ಎಂದು ಹೇಳಿರುವ ಲಂಕಾ ಮಾಜಿ ನಾಯಕ ಮಹೇಲಾ ಜಯವರ್ಧನೆ, ಗೆಲುವಿಗಾಗಿ ಪರಿತಪಿಸುತ್ತಿರುವ ರಾಷ್ಟ್ರೀಯ ತಂಡಕ್ಕೆ ಸಲಹೆ ನೀಡಲು ನಿರಾಕರಿಸಿದ್ದಾರೆ. 

‘ಕಳೆದ ವರ್ಷದಲ್ಲಿ ತಂಡದ ಅಭಿವೃದ್ದಿಗಾಗಿ ಸೂಚಿಸಿದ್ದ ಎಲ್ಲಾ ಶಿಫಾರಸುಗಳನ್ನು ಲಂಕಾ ಕ್ರಿಕೆಟ್ ಸಂಸ್ಥೆ ತಳ್ಳಿ ಹಾಕಿದೆ. ಇನ್ನೊಮ್ಮೆ ಅಂತಹ ಕೆಟ್ಟ ಅನುಭವವಾಗುವುದು ಬೇಡ. ಸಮಯ ವ್ಯರ್ಥಗೊಳಿಸಿವುದಿದ್ದರೆ ನಮ್ಮನ್ನು ಕರೆಯಬೇಡಿ ಎಂದು ತಿಳಿಸಿದ್ದೇನೆ’ ಎಂದು ಜಯವರ್ಧನೆ ಹೇಳಿದ್ದಾರೆ.

ಶ್ರೀಲಂಕಾ ತಂಡದ ಮಾಜಿ ನಾಯಕ ಜಯವರ್ಧನೆ 149 ಟೆಸ್ಟ್ ಪಂದ್ಯಗಳನ್ನಾಡಿ 11,814 ರನ್ ಸಿಡಿಸಿದ್ದಾರೆ. ಇನ್ನು 448 ಏಕದಿನ ಪಂದ್ಯಗಳಲ್ಲಿ ಲಂಕಾ ತಂಡವನ್ನು ಪ್ರತಿನಿಧಿಸಿದ್ದ ಮಹೇಲಾ 12,650 ರನ್ ಸಿಡಿಸಿದ್ದಾರೆ. ಜತೆಗೆ 55 ಟಿ20 ಪಂದ್ಯಗಳಲ್ಲೂ ಆಡಿದ್ದರು.

loader