ಏಕದಿನ ಕ್ರಿಕೆಟ್'ನಲ್ಲಿ 2 ದ್ವಿಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆ ರೋಹಿತ್ ಶರ್ಮಾ ಅವರದ್ದಾಗಿದೆ.
ನವದೆಹಲಿ(ಜೂ.16): ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ರೋಹಿತ್ ಶರ್ಮಾ ಅವರನ್ನು ಟ್ವಿಟರ್'ನಲ್ಲಿ ಅಭಿನಂದಿಸಿರುವ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್, ಅವರಿಂದ ಭಾನುವಾರ, ಪಾಕಿಸ್ತಾನ ವಿರುದ್ಧ ಏಕದಿನದಲ್ಲಿ 3ನೇ ದ್ವಿಶತಕ ನಿರೀಕ್ಷೆ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.
ಏಕದಿನ ಕ್ರಿಕೆಟ್'ನಲ್ಲಿ 2 ದ್ವಿಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆ ರೋಹಿತ್ ಶರ್ಮಾ ಅವರದ್ದಾಗಿದೆ.
2002ರಲ್ಲಿ ಶ್ರೀಲಂಕಾ ತಂಡದೊಂದಿಗೆ ಜಂಟಿ ಚಾಂಪಿಯನ್'ಶಿಪ್ ಹಂಚಿಕೊಂಡಿದ್ದ ಟೀಂ ಇಂಡಿಯಾ, 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚಾಂಪಿಯನ್ ಆಗಿ ಮೆರೆದಾಡಿತ್ತು.
ಇದೇ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಂತಕ್ಕೇರಿರುವ ಪಾಕಿಸ್ತಾನ, ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
