ಟೀಮ್ಇಂಡಿಯಾದಲ್ಲಿ ಅತ್ಯುತ್ತಮ ಆಲ್‌ರೌಂಡರ್ ಆಗಿ ಮಿಂಚಬೇಕು. ಭಾರತ ತಂಡವನ್ನ ಪ್ರತಿನಿಧಿಸಬೇಕು ಎಂಬ ಕನಸಿನಲ್ಲಿದ್ದ ಕೋಲ್ಕತ್ತಾದ ಉದಯೋನ್ಮುಖ ಕ್ರಿಕೆಟಿಗನ ಬದುಕು ಸಾವಿನಲ್ಲಿ ಅಂತ್ಯವಾಗಿದೆ.

ಕೋಲ್ಕತ್ತಾ(ಜೂನ್.11): ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಯುವ ಕ್ರಿಕೆಟಿಗ ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಕೋಲ್ಕತ್ತಾ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದ 21 ವರ್ಷದ ದೇಬಬ್ರತ ಪೌಲ್ ಸಿಡಿಲು ಬಡಿದು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ತಕ್ಷಣವೇ ದೇಬಬ್ರತಾ ಪೌಲ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆದರೆ ತುರ್ತು ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಸಮೀಪದ ರಾಮಕೃಷ್ಣ ಮಿಷನ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಅಷ್ಟರೊಳಗೆ ಯುವ ಕ್ರಿಕೆಟಿಗನ ಪ್ರಾಣ ಪಕ್ಷಿ ಹಾರಿಹೋಗಿದೆ.

ಮೇ ತಿಂಗಳಿನಲ್ಲಿ ಕೋಲ್ಕತ್ತಾ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡಿದ್ದ ದೇಬಬ್ರತ ಪೌಲ್, ಆಲ್‌ರೌಂಡರ್ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದರು. ಎಂದಿನಂತೆ ವಾರ್ಮ್ ಅಪ್ ಬಳಿಕ ಇನ್ನೇನು ಕ್ರಿಕೆಟ್ ಪ್ರಾಕ್ಟೀಸ್ ಆರಂಭಿಸಬೇಕು ಅನ್ನುವಷ್ಟರಲ್ಲೇ ಈ ದುರ್ಘಟನೆ ನಡೆದಿದೆ ಎಂದು ಕೋಲ್ಕತ್ತಾ ಕ್ರಿಕೆಟ್ ಆಕಾಡೆಮಿ ಕಾರ್ಯದರ್ಶಿ ಅಬ್ದುಲ್ ಮಸೂದ್ ಹೇಳಿದ್ದಾರೆ.