2013ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ  ಸ್ಪಾಟ್ ಫಿಕ್ಸಿಂಗ್  ಹಗರಣದಲ್ಲಿ ಭಾಗಿಯಾದ ಸಂಬಂಧ ಬಿಸಿಸಿಐ ವೇಗದ ಬೌಲರ್'ಗೆ ಜೀವಮಾನ ನಿಷೇಧವೇರಿತ್ತು.

ನವದೆಹಲಿ(ಫೆ.05): ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ಅವರ ಜೀವಮಾನ ನಿಷೇಧ ಕುರಿತು ಉತ್ತರ ನೀಡಬೇಕೆಂದು ಬಿಸಿಸಿಐಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

2013ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಸಂಬಂಧ ಬಿಸಿಸಿಐ ವೇಗದ ಬೌಲರ್'ಗೆ ಜೀವಮಾನ ನಿಷೇಧವೇರಿತ್ತು. ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಕೋರ್ಟ್ ಮೆಟ್ಟಿಲೇರಿದ್ದರು.

ಕೇರಳ ಹೈಕೋರ್ಟ್'ನ ಏಕ ಸದಸ್ಯತ್ವ ಪೀಠ ನಿಷೇಧವನ್ನು ತೆರವಿಗೊಳಿಸಿತ್ತು. ಆದರೆ ವಿಭಾಗೀಯ ಪೀಠ ಬಿಸಿಸಿಐ ಆದೇಶವನ್ನು ಎತ್ತಿಹಿಡಿದಿತ್ತು.