ಬೀಜಿಂಗ್‌(ಅ.03): ಭಾರ​ತೀಯ ಟೆನಿಸ್‌ ಆಟ​ಗಾ​ರ​ರಾದ ಲಿಯಾಂಡರ್‌ ಪೇಸ್‌ ಹಾಗೂ ರೋಹನ್‌ ಬೋಪಣ್ಣ ಇಲ್ಲಿ ನಡೆ​ಯು​ತ್ತಿ​ರುವ ಚೀನಾ ಓಪನ್‌ ಟೆನಿಸ್‌ ಟೂರ್ನಿಯ ಪುರು​ಷರ ಡಬಲ್ಸ್‌ ವಿಭಾ​ಗದ ಆರಂಭಿಕ ಸುತ್ತಿ​ನಲ್ಲೇ ಸೋತು ಹೊರಬಿದ್ದಿದ್ದಾರೆ.

ತಮ್ಮ ಜತೆ​ಗಾರ ಕೆನ​ಡಾದ ಡೇನಿ​ಯಲ್‌ ನೆಸ್ಟರ್‌ ಜತೆ​ಗೂಡಿ ಕಣ​ಕ್ಕಿ​ಳಿ​ದಿದ್ದ ರೋಹ​ನ್‌ ಬೋಪಣ್ಣ, ಸ್ಪೇನ್‌ನ ಎದು​ರಾ​ಳಿ​ಗ​ಳಾದ ರಾಫೆಲ್‌ ನಡಾಲ್‌ ಹಾಗೂ ಪಾಬ್ಲೊ ಕ್ಯಾರೆನೊ ಬುಸ್ಟಾವಿರುದ್ಧ 6-7, 4-6 ಸೆಟ್‌​ಗಳ ಅಂತ​ರ​ದಲ್ಲಿ ಮಣಿ​ದರೆ, ಮತ್ತೊಂದು ಪಂದ್ಯ​ದಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ಜರ್ಮ​ನಿಯ ಜತೆ​ಗಾರ ಆಂಡ್ರೆ ಬೆಗೆ​ಮನ್‌ ಜೋಡಿ ಅಮೆ​ರಿ​ಕದ ಜ್ಯಾಕ್‌ ಸೋಕ್‌ ಹಾಗೂ ಆಸ್ಪ್ರೇ​ಲಿ​ಯಾದ ಬರ್ನಾಡ್‌ ಟಾಮಿಕ್‌ ಜೋಡಿ ವಿರುದ್ಧ 6-3, 5-7, 7-10 ಸೆಟ್‌​ಗಳ ಅಂತ​ರ​ದಲ್ಲಿ ಸೋಲು ಕಂಡಿತು.

ಸುಮಾರು ಒಂದು ಗಂಟೆ ಮೂವತ್ತು ನಿಮಿ​ಷ​ಗಳ ಕಾಲ ನಡೆದ ಪಂದ್ಯದ ಆರಂಭಿಕ ಸೆಟ್‌​ನಲ್ಲಿ ಭಾರ​ತ- ಕೆನಡಾ ಜೋಡಿ, ಉತ್ತಮ ಹೋರಾಟ ತೋರಿ​ದ​ರಾ​ದರೂ ವಿಶ್ವದ 4ನೇ ಶ್ರೇಯಾಂಕಿತ ಆಟ​ಗಾರ ರಾಫೆಲ್‌ ನಡಾಲ್‌ ಹಾಗೂ ಅವರ ಪಾಬ್ಲೊ ಅವರ ಮುಂದೆ ಕೊಂಚ ಮಂಕಾ​ದಂತೆ ಕಂಡಿತು. ಆದರೂ, ಛಲ ಬಿಡದೇ ನೀಡಿದ ಹೋರಾ​ಟದ ಹೊರ​ತಾ​ಗಿಯೂ ಈ ಜೋಡಿ ಸೋಲು ಕಾಣ​ಬೇ​ಕಾ​ಯಿತು. ಮತ್ತೊಂದು ಪಂದ್ಯ​ದಲ್ಲಿ ಸುಮಾರು ಒಂದು ಗಂಟೆ ಇಪ್ಪ​ತ್ತೇಳು ನಿಮಿ​ಷ​ಗಳವರೆಗೆ ಸೆಣ​ಸಿದ ಲಿಯಾಂಡರ್‌ ಹಾಗೂ ಬೆಗೆ​ಮನ್‌ ಜೋಡಿ ಮೂರು ಸೆಟ್‌ಗಳ ಕಠಿಣಕಾರಿ ಹೋರಾಟದಲ್ಲಿ ಸೋಲಪ್ಪಿತು.