ಕೆಕೆಆರ್‌'ನ ಕಾಯಂ ಬೌಲಿಂಗ್ ಕೋಚ್ ಆಗಿದ್ದ ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂ ಈ ಋತುವಿನ ಐಪಿಎಲ್ ಪಂದ್ಯಾವಳಿಗೆ ಅಲಭ್ಯವಾಗಿದ್ದರಿಂದ ಬಾಲಾಜಿಗೆ ಕೆಕೆಆರ್ ಫ್ರಾಂಚೈಸಿ ಈ ಜವಾಬ್ದಾರಿ ನೀಡಿದೆ.
ಮುಂಬೈ(ಜ.04): ಭಾರತ ತಂಡದ ಮಾಜಿ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ ಕೋಲ್ಕತಾ ನೈಟ್ ರೈಡರ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್'ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್'ನಿಂದ ನಿವೃತ್ತಿ ಪಡೆದರೂ, ತಮಿಳುನಾಡು ತಂಡದ ಬೌಲಿಂಗ್ ಕೋಚ್ ಆಗಿ ಮುಂದುವರೆದಿದ್ದಾರೆ.
ಇನ್ನು 2011-13ರ ಅವಧಿಯಲ್ಲಿ ಕೆಕೆಆರ್ ಬೌಲಿಂಗ್ ಪಡೆಯಲ್ಲಿದ್ದ ಬಾಲಾಜಿ, 2012ರಲ್ಲಿ ಕೆಕೆಆರ್ ಚಾಂಪಿಯನ್ ಆದಾಗಲೂ ತಂಡದಲ್ಲಿದ್ದರು.
ಅಂದಹಾಗೆ ಕೆಕೆಆರ್'ನ ಕಾಯಂ ಬೌಲಿಂಗ್ ಕೋಚ್ ಆಗಿದ್ದ ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂ ಈ ಋತುವಿನ ಐಪಿಎಲ್ ಪಂದ್ಯಾವಳಿಗೆ ಅಲಭ್ಯವಾಗಿದ್ದರಿಂದ ಬಾಲಾಜಿಗೆ ಕೆಕೆಆರ್ ಫ್ರಾಂಚೈಸಿ ಈ ಜವಾಬ್ದಾರಿ ನೀಡಿದೆ.
ಹೊಸ ಜವಬ್ದಾರಿಯ ಕುರಿತು ಪ್ರತಿಕ್ರಿಯಿಸಿರುವ ಚನ್ನೈ ಮೂಲದ ಬೌಲರ್, ನಾನು ಕೆಕೆಆರ್ ತಂಡದಲ್ಲಿ ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಈಗ ಕೆಕೆಆರ್ ಪ್ರಾಂಚೈಸಿ ನನ್ನ ಮೇಲೆ ವಿಶ್ವಾಸವಿಟ್ಟು ಹೊಸ ಜವಬ್ದಾರಿ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
