ಉತ್ತರ ಪ್ರದೇಶದ ಈ ಎಡಗೈ ಸ್ಪಿನ್ನರ್ ಇದೇ ಮೊದಲ ಬಾರಿಗೆ ಭಾರತದ ಪರ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವುದು ವಿಶೇಷ.

ನವದೆಹಲಿ(ಫೆ.07): ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಚುಟುಕು ಪಂದ್ಯದ ವೇಳೆ ಮೊಣಕಾಲು ನೋವಿಗೆ ತುತ್ತಾಗಿರುವ ಲೆಗ್‌'ಸ್ಪಿನ್ನರ್ ಅಮಿತ್ ಮಿಶ್ರಾ ಗುರುವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದು, ಅವರ ಬದಲಿಗೆ ತಂಡದಲ್ಲಿ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

22ರ ಹರೆಯದ ಕುಲದೀಪ್, 22 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18.94ರ ಸರಾಸರಿಯಲ್ಲಿ 81 ವಿಕೆಟ್ ಪಡೆದಿದ್ದಾರೆ. ಜತೆಗೆ ಈ ಸಾಲಿನ ರಣಜಿಯ 8 ಪಂದ್ಯಗಳಲ್ಲಿ ಅವರು 35 ವಿಕೆಟ್‌'ಗಳನ್ನು ಉರುಳಿಸಿದ್ದರು.

ಉತ್ತರ ಪ್ರದೇಶದ ಈ ಎಡಗೈ ಸ್ಪಿನ್ನರ್ ಇದೇ ಮೊದಲ ಬಾರಿಗೆ ಭಾರತದ ಪರ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವುದು ವಿಶೇಷ.