KPL 2019 ಟೂರ್ನಿ ವೇಳಾಪಟ್ಟಿ ಬಿಡುಗಡೆ-ಹರಾಜಿಗೆ ಕ್ಷಣಗಣನೆ!
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಮತ್ತೆ ಬಂದಿದೆ. ಟೂರ್ನಿ ವೇಳಾಪಟ್ಟಿ ಬಿಡುಗಡೆ ಮಾಜಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ ಇದೀಗ ಆಟಗಾರರ ಹರಾಜು ಪ್ರಕ್ರಿಯೆಗೆ ಸಕಲ ಸಿದ್ದತೆ ನಡೆಸಿದೆ. ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು(ಜು.26): ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್ ಹಬ್ಬಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇದೀಗ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ರಸದೌತಣ ನೀಡಲಿದೆ. 7 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ KPL ಟೂರ್ನಿ 8ನೇ ಆವೃತ್ತಿಗೆ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ KPL ವೇಳಾಪಟ್ಟಿ ಬಿಡುಗಡೆ ಮಾಡಿದರು.
ಇದನ್ನೂ ಓದಿ: ಜೂನಿಯರ್ ಬುಮ್ರಾಗಿಲ್ಲ ಕೆಪಿಎಲ್‌ನಲ್ಲಿ ಅವಕಾಶ..?
ಆಗಸ್ಟ್ 16 ರಿಂದ ಚುಟುಕು ಕ್ರಿಕೆಟ್ ಹಬ್ಬ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 1 ರಂದು ಫೈನಲ್ ಪಂದ್ಯದೊಂದಿಗೆ ಟೂರ್ನಿ ಅಂತ್ಯಗೊಳ್ಳಲಿದೆ. ಬೆಂಗಳೂರಿನಲ್ಲಿ ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಹಂತದ ಬಳಿಕ 2ನೇ ಹಂತದ ಪಂದ್ಯಗಳು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ. ಇನ್ನು 3ನೇ ಹಾಗೂ ಅಂತಿಮ ಹಂತದ ಪಂದ್ಯಗಳು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಹೊಟೆಲ್ ಹಾಗೂ ವಾತಾವರಣದ ಸಮಸ್ಯೆಯಿಂದ ಶಿವಮೊಗ್ಗದಲ್ಲಿ ಕೆಪಿಎಲ್ ಪಂದ್ಯ ಆಯೋಜನೆಗೆ ತೊಡಕಾಗಿದೆ. ವೇಳಾಪಟ್ಟಿ ಬಿಡುಗಡೆ ಮಾಡಿದ ಕೆಎಸ್‌ಸಿಎ, ಜುಲೈ 27 ರಂದು 8ನೇ ಆವೃತ್ತಿ ಕೆಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಆಯೋಜಿಸಿದೆ.
ಕಳೆದ 7 ಆವೃತ್ತಿಗಳಲ್ಲಿ ಸೆಮಿಫೈನಲ್ ಮಾದರಿಯಲ್ಲಿದ್ದ ಪಂದ್ಯ ಆಯೋಜಿಸಲಾಗಿತ್ತು. ಇದೀಗ ಐಪಿಎಲ್ ಮಾದರಿಯ ಪ್ಲೇ ಆಫ್ ಪರಿಚಯಿಸಲಾಗಿದೆ. ಪ್ರತಿಭಾನ್ವಿತ ಯುವ ಕ್ರಿಕೆಟಿಗರಿಗೆ ಇದು ಅತ್ಯುತ್ತಮ ಅವಕಾಶ. ದೇಶದ ಕ್ರಿಕೆಟ್ ಇತಿಹಾಸದಲ್ಲಿ 7 ಆವೃತ್ತಿಗಳನ್ನೂ ಪೂರೈಸಿ ಇದೀಗ 8ನೇ ಆವೃತ್ತಿ ಕಾಲಿಟ್ಟಿರುವ ಏಕೈಕ ಚುಟುಕು ಲೀಗ್ ಟೂರ್ನಿ ಕೆಪಿಎಲ್ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿದರು.
ಈ ಮಹತ್ವದ ಟೂರ್ನಿ ಆಯೋಜಿಸುತ್ತಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಎಲ್ಲಾ ಆಯೋಜಕರು, ಟೂರ್ನಿ ಆಡಲು ಸಜ್ಜಾಗಿರುವ ಆಟಗಾರರು, ಫ್ರಾಂಚೈಸಿ ಮಾಲೀಕರಿಗೆ ವೆಂಕಟೇಶ್ ಪ್ರಸಾದ್ ಶುಭಕೋರಿದರು. ಕಳೆದ ಆವೃತ್ತಿಗಳಂತೆ ಈ ಬಾರಿಯ ಕೆಪಿಎಲ್ ಟೂರ್ನಿಯನ್ನು ಕ್ರಿಕೆಟ್ ಅಭಿಮಾನಿಗಳು ಬೆಂಬಲಿಸಬೇಕು ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ಮನವಿ ಮಾಡಿದರು. ಸಮಾರಂಭದಲ್ಲಿ KSCA ಕಾರ್ಯದರ್ಶಿ ಸುಧಾಕರ್ ರಾವ್, ಕೆಪಿಎಲ್ ಟೂರ್ನಿ ರಾಯಭಾರಿ, ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿಎಸ್ ಚಂದ್ರಶೇಕರ್ ಹಾಗೂ ಕರ್ನಾಟಕ ಕ್ರಿಕೆಟಿಗರು ಪಾಲ್ಗೊಂಡಿದ್ದರು.
KPL 2019 ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ: