ನೆಹ್ರಾ 2003ರ ವಿಶ್ವಕಪ್'ನಲ್ಲಿ ನ್ಯೂಜಿಲೆಂಡ್ ವಿರುದ್ಧ 23/6 ವಿಕೆಟ್ ಕಬಳಿಸಿದ್ದನ್ನು ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.
ನವದೆಹಲಿ(ನ.01): ಭಾರತ ತಂಡದ ಹಿರಿಯ ವೇಗಿ ಆಶಿಶ್ ನೆಹ್ರಾ ಇಂದು ಕೊನೆ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಬಳಿಕ ನಿವೃತ್ತಿ ಪಡೆಯುವುದಾಗಿ ನೆಹ್ರಾ ಈ ಮೊದಲೇ ಘೋಷಿಸಿದ್ದರು.
1999ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, ಭಾರತೀಯ ಕ್ರಿಕೆಟ್'ನಲ್ಲಿ ಕೆಲವು ಅಪರೂಪದ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲೂ ನೆಹ್ರಾ 2003ರ ವಿಶ್ವಕಪ್'ನಲ್ಲಿ ನ್ಯೂಜಿಲೆಂಡ್ ವಿರುದ್ಧ 23/6 ವಿಕೆಟ್ ಕಬಳಿಸಿದ್ದನ್ನು ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.
ಅರ್ಧ ವೃತ್ತಿಬದುಕನ್ನು ಗಾಯಾಳುವಾಗಿಯೇ ಕಳೆದ ನೆಹ್ರಾ, ಕೆಲ ವರ್ಷಗಳ ಹಿಂದೆ ಭಾರತ ತಂಡಕ್ಕೆ ವಾಪಸಾದ ರೀತಿ ನಿಜಕ್ಕೂ ರೋಚಕ. ಮೊದಲ ಪಂದ್ಯವನ್ನು ಗೆದ್ದು ಆಶಿಸ್ ನೆಹ್ರಾಗೆ ಸ್ಮರಣೀಯ ಬೀಳ್ಕೊಡುಗೆ ನೀಡುವ ನಿರೀಕ್ಷೆಯಲ್ಲಿದೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ.
