ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬ್ರಾವೋ ಅವರನ್ನು ಕೆಕೆಆರ್ ಪ್ರಾಂಚೈಸಿಯು 50 ಲಕ್ಷ ನೀಡಿ ಖರೀದಿಸಿದೆ.
ಕೋಲ್ಕತಾ(ಮಾ.29): ಐಪಿಎಲ್ ಪ್ರಶಸ್ತಿ ಮೇಲೆ ಮತ್ತೊಮ್ಮೆ ಕಣ್ಣಿಟ್ಟಿರುವ ಕೊಲ್ಕತಾ ನೈಟ್ ರೈಡರ್ಸ್ ತಂಡ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ.
ಆದರೆ ಐದನೇ ದಿನದ ವೇಳೆ ಕ್ರಿಕೆಟ್ ಅಭ್ಯಾಸ ನಡೆಸುವ ವೇಳೆ ಕೆಕೆಆರ್ ತಂಡದ ಬ್ಯಾಟ್ಸ್'ಮನ್ ಡೇರನ್ ಬ್ರಾವೋ ಬಲ ಮುಂಗೈಗೆ ಗಾಯ ಮಾಡಿಕೊಂಡಿದ್ದಾರೆ. ಉತ್ತರಪ್ರದೇಶದ ವೇಗದ ಬೌಲರ್ ಅಂಕಿತ್ ರಜಪೂತ್ ಬೌಲಿಂಗ್ ರಕ್ಷಣಾತ್ಮಕವಾಗಿ ಆಡುವಾಗ ಮುಂಗೈಗೆ ಗಾಯಮಾಡಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಪರಿಣಾಮ ತಕ್ಷಣ ನೆಟ್ ಪ್ರಾಕ್ಟೀಸ್ ಬಿಟ್ಟು ಪೆವಿಲಿಯನ್ ಸೇರಿದರು.
ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬ್ರಾವೋ ಅವರನ್ನು ಕೆಕೆಆರ್ ಪ್ರಾಂಚೈಸಿಯು 50 ಲಕ್ಷ ನೀಡಿ ಖರೀದಿಸಿದೆ.
ಈಗಾಗಲೇ ಸ್ಟಾರ್ ಆಲ್ರೌಂಡರ್ ಯೂಸೂಫ್ ಪಠಾಣ್, ನಾಯಕ ಗೌತಮ್ ಗಂಭೀರ್ ಕೆಕೆಆರ್ ತಂಡವನ್ನು ಕೂಡಿಕೊಂಡಿದ್ದು, ಶಕೀಬ್ ಅಲ್-ಹಸನ್ , ಆಂಡ್ರೆ ರಸೇಲ್ ಇನ್ನಷ್ಟೇ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಕೆಕೆಆರ್ ತಂಡವು ತನ್ನ ಮೊದಲ ಅಭಿಯಾನವನ್ನು ರಾಜ್'ಕೋಟ್'ನಲ್ಲಿ ಏಪ್ರಿಲ್ 7ರಿಂದ ಆರಂಭಿಸಲಿದ್ದು, ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ.
