ವಿಶ್ವ ಕಪ್ ಗೆದ್ದರೆ ಶರ್ಟ್ ಬಿಚ್ಚುವೆ

First Published 8, Apr 2018, 12:46 PM IST
Kohli  Talk About 2019 World Cup
Highlights

2002ರ ನಾಟ್‌ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿ ಸಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2019ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದರೆ ಕೊಹ್ಲಿ ಸಹ ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆ ಎಂದು ಗಂಗೂಲಿ ಈ ಹಿಂದೆ ಹೇಳಿದ್ದರು. ಅವರ ಮಾತನ್ನು ಸ್ವತಃ ಕೊಹ್ಲಿ ಒಪ್ಪಿಕೊಂಡಿದ್ದಾರೆ.

ಕೋಲ್ಕತಾ: 2002ರ ನಾಟ್‌ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿ ಸಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2019ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದರೆ ಕೊಹ್ಲಿ ಸಹ ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆ ಎಂದು ಗಂಗೂಲಿ ಈ ಹಿಂದೆ ಹೇಳಿದ್ದರು. ಅವರ ಮಾತನ್ನು ಸ್ವತಃ ಕೊಹ್ಲಿ ಒಪ್ಪಿಕೊಂಡಿದ್ದಾರೆ.

ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗ ವಹಿಸಿದ್ದ ಗಂಗೂಲಿ ‘ಭಾರತ ವಿಶ್ವ ಗೆದ್ದರೆ ಕೊಹ್ಲಿ, ಲಂಡನ್‌ನ ಆಕ್ಸ್‌ಫರ್ಡ್ ರಸ್ತೆಯಲ್ಲಿ ಶರ್ಟ್ ಬಿಚ್ಚಿ ಓಡಲಿದ್ದಾರೆ. ಅವರ ಸಿಕ್ಸ್ ಪ್ಯಾಕ್ ದೇಹವನ್ನು ಸೆರೆಹಿಡಿಯಲು ಕ್ಯಾಮರಾಗಳು ಸಿದ್ಧವಿರಬೇಕು’ ಎಂದು ಮತ್ತೊಮ್ಮೆ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಹ್ಲಿ ‘ಶೇ.120ರಷ್ಟು ಖಚಿತ. ಶರ್ಟ್ ಬಿಚ್ಚಿ ಓಡಲಿದ್ದೇನೆ. ನಾನೊಬ್ಬನೇ ಅಲ್ಲ, ಖಂಡಿತವಾಗಿಯೂ ಹಾರ್ದಿಕ್ ಪಾಂಡ್ಯ ಜತೆಗಿರಲಿದ್ದಾರೆ. ಬೂಮ್ರಾಗೂ ಸಿಕ್ಸ್ ಪ್ಯಾಕ್ ಇದೆ. ಇನ್ನೂ ಅನೇಕರು ನನ್ನನ್ನು ಕೂಡಿಕೊಳ್ಳಲಿದ್ದಾರೆ’ ಎಂದರು.

loader