2008ರಲ್ಲಿ ಏಕದಿನ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೆ ಕೊಹ್ಲಿ ಆಡಿರುವ ಎಲ್ಲ ಪಂದ್ಯಗಳೂ ಧೋನಿ ನಾಯಕತ್ವದಲ್ಲೇ ಆಡಿದ್ದಾರೆ.  ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರಲಿಲ್ಲ. ಈ ಸಂದರ್ಭ ಕೊಹ್ಲಿ ಸ್ಥಾನ ಭದ್ರವಿರಲಿಲ್ಲ. ಕೊಹ್ಲಿಯ ಟ್ಯಾಲೆಂಟ್ ಅರಿತಿದ್ದ ಧೋನಿ ಅವರನ್ನ ಉಳಿಸಿಕೊಂಡರಂತೆ.

ಮುಂಬೈ(ಜ.07): ಮಹೇಂದ್ರ ಸಿಂಗ್ ಧೋನಿ ಕೇವಲ ಯಶಸ್ವಿ ಕ್ಯಾಪ್ಟನ್ ಅಷ್ಟೇ ಅಲ್ಲ, ತನ್ನ ುತ್ತರಾಧಿಕಾರಿ ವಿರಾಟ್ ಕೊಹ್ಲಿಗೆ ಆಪತ್ಬಾಂಧವನೂ ಹೌದು. ಹಲವು ಬಾರಿ ತಾನು ತಂಡದಿಂದ ಹೊರಬೀಳುತ್ತಿದ್ದಾಗ ಧೋನಿ ತನ್ನನ್ನ ರಕ್ಷಿಸಿರುವುದಾಗಿ ಕೊಹ್ಲಿ ಹೇಳಿಕೊಂಡಿದ್ದಾರೆ.

2008ರಲ್ಲಿ ಏಕದಿನ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೆ ಕೊಹ್ಲಿ ಆಡಿರುವ ಎಲ್ಲ ಪಂದ್ಯಗಳೂ ಧೋನಿ ನಾಯಕತ್ವದಲ್ಲೇ ಆಡಿದ್ದಾರೆ. ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರಲಿಲ್ಲ. ಈ ಸಂದರ್ಭ ಕೊಹ್ಲಿ ಸ್ಥಾನ ಭದ್ರವಿರಲಿಲ್ಲ. ಕೊಹ್ಲಿಯ ಟ್ಯಾಲೆಂಟ್ ಅರಿತಿದ್ದ ಧೋನಿ ಅವರನ್ನ ಉಳಿಸಿಕೊಂಡರಂತೆ.

`ಆರಂಭಿಕ ದಿನಗಳಲ್ಲಿ ಧೋನಿ ನನಗೆ ಮಾರ್ಗದರ್ಶಿಯಾಗಿದ್ದರು, ನನಗೆ ಅವಕಾಶ ಕೊಟ್ಟರು. ಒಬ್ಬ ಕ್ರಿಕೆಟಿಗನಾಗಿ ಬೆಳೆಯಲು ಧೋನಿ ನನಗೆ ಸಾಕಷ್ಟು ಸಮಯ ಕೊಟ್ಟರು. ಹಲವು ಬಾರಿ ತಂಡದಿಂದ ಕೈಬಿಡುವ ಸಂದರ್ಭ ಬಂದಾಗಲೂ ನನ್ನನ್ನ ಉಳಿಸಿಕೊಂಡಿದ್ದಾರೆ' ಎಂದು ಕೊಹ್ಲಿ ಶ್ಲಾಘಿಸಿದ್ದಾರೆ.