ಕಳೆದ ವರ್ಷದಲ್ಲಿ ಸಾಕಷ್ಟು ವೈಫಲ್ಯ ಅನುಭವಿಸಿದ್ದ ಮಾಹಿ, ಪ್ರಸಕ್ತ ವರ್ಷದಲ್ಲಿ 19 ಪಂದ್ಯದಲ್ಲಿ 89.57 ಸರಾಸರಿಯಲ್ಲಿ 627 ರನ್ ಕಲೆಹಾಕಿದ್ದಾರೆ.
ಕೋಲ್ಕತಾ(ಸೆ.19): ಎಂ.ಎಸ್.ಧೋನಿ ತಮ್ಮ ಬ್ಯಾಟಿಂಗ್ ಲಯವನ್ನು ಮರಳಿ ಪಡೆದಿರುವುದರ ಹಿಂದೆ ನಾಯಕ ವಿರಾಟ್ ಕೊಹ್ಲಿಯ ಪಾತ್ರ ಪ್ರಮುಖವಾದದ್ದು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಲಯ ಕಂಡುಕೊಂಡು ಪರದಾಡುತ್ತಿದ್ದಾಗ ಕೊಹ್ಲಿ ಅವರನ್ನು ಬೆಂಬಲಿಸದೆ ಹೋಗಿದ್ದರೆ, ಧೋನಿ ತಂಡದಿಂದ ಹೊರಬೀಳುತ್ತಿದ್ದರು. ಆದರೆ ವಿರಾಟ್ ತೋರಿದ ವಿಶ್ವಾಸವೇ ಧೋನಿ ತಮ್ಮ ಟೀಕಾಕಾರರಿಗೆ ಬ್ಯಾಟ್'ನಿಂದಲೇ ಉತ್ತರಿಸಲು ನೆರವಾಯಿತು ಎಂದು ಗಂಗೂಲಿ ಹೇಳಿದ್ದಾರೆ.
ಕಳೆದ ವರ್ಷದಲ್ಲಿ ಸಾಕಷ್ಟು ವೈಫಲ್ಯ ಅನುಭವಿಸಿದ್ದ ಮಾಹಿ, ಪ್ರಸಕ್ತ ವರ್ಷದಲ್ಲಿ 19 ಪಂದ್ಯದಲ್ಲಿ 89.57 ಸರಾಸರಿಯಲ್ಲಿ 627 ರನ್ ಕಲೆಹಾಕಿದ್ದಾರೆ.