2008ರಿಂದ ಧೋನಿ ಜೊತೆಯಲ್ಲಿ ಸೀಮಿತ ಓವರ್`ಗಳ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ, ಟ್ವಿಟ್ಟರ್`ನಲ್ಲಿ ತಮ್ಮ ಮನದಾಳದ ಮಾತುಗಳನ್ನ ಹೊರ ಹಾಕಿದ್ಧಾರೆ.

ನವದೆಹಲಿ(ಜ.06): ಇತ್ತೀಚೆಗೆ ತಾನೇ ಏಕದಿನ ಮತ್ತು ಟಿ-20 ನಾಯಕತ್ವ ಪಟ್ಟವನ್ನ ತ್ಯಜಿಸಿದ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಸ್ಫೂರ್ತಿದಾಯಕ ನಾಯಕ ಎಂದು ಹಾಡಿ ಹೊಗಳಿದ್ದಾರೆ.

2008ರಿಂದ ಧೋನಿ ಜೊತೆಯಲ್ಲಿ ಸೀಮಿತ ಓವರ್`ಗಳ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ, ಟ್ವಿಟ್ಟರ್`ನಲ್ಲಿ ತಮ್ಮ ಮನದಾಳದ ಮಾತುಗಳನ್ನ ಹೊರ ಹಾಕಿದ್ಧಾರೆ.

ಯಾವುದೇ ಒಬ್ಬ ಯುವ ಕ್ರಿಕೆಟಿಗ ತನ್ನ ಜೊತೆಯಲ್ಲಿರಬೇಕೆಂದು ಬಯಸುವ ನಾಯಕ ನೀನು, ನೀನು ಯಾವಾಗಲೂ ನನ್ನ ನಾಯಕ ಎಂ.ಎಸ್. ಧೋನಿಬಾಯ್ ಎಂದು ಟ್ವೀಟ್ ಮಾಡಿದ್ದಾರೆ.

ಭಾರತ ಕ್ರಿಕೆಟಿಗೆ ಧೋನಿ ನಾಯಕತ್ವದಲ್ಲಿ ನೀಡಿದ ಕೊಡುಗೆ ಬಗ್ಗೆ ವಿಶ್ವ ಶ್ರೇಷ್ಠ ಕ್ರಿಕೆಟಿಗರಾದ ಮೈಕಲ್ ಕ್ಲಾರ್ಕ್, ಮೈಕಲ್ ವಾನ್, ಶಾಹಿದ್ ಅಫ್ರಿದಿ ಮತ್ತು ಜಹೀರ್ ಅಬ್ಬಾಸ್ ಹಾಡಿ ಹೊಗಳಿದ್ದಾರೆ.

2019ರ ವಿಶ್ವಕಪ್`ಗೆ ಎರಡೂವರೆ ವರ್ಷ ಬಾಕಿ ಉಳಿದಿರುವ ಈ ಸಂದರ್ಭದಲ್ಲಿ ಕೊಹ್ಲಿ ನಾಯಕತ್ವ ನೀಡುತ್ತಿರುವುದು ಸುಸಂದರ್ಭ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್`ಕೆ ಪ್ರಸಾದ್ ಮತ್ತು ಇಂಡಿಯಾ ಎ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.