ನ್ಯೂಜಿಲೆಂಡ್​​​ ವಿರುದ್ಧದ ಸರಣಿಗೆ ಭಾರತೀಯ ಆಟಗಾರರು ರೆಡಿಯಾಗ್ತಿದ್ದಾರೆ. ಅದ್ರಲ್ಲೂ ಕ್ಯಾಪ್ಟನ್​​ ಕೊಹ್ಲಿ ಆಟದ ಬಗ್ಗೆ ಮಾತ್ರವಲ್ಲ, ಗೆಟಪ್​​​ ಬಗ್ಗೆನೂ ತಲೆ ಕೆಡಿಸ್ಕೊಂಡು ಹೇರ್​​ ಸ್ಟೈಲ್​​​​ ಚೇಂಜ್​​ ಮಾಡಿದ್ದಾರೆ. 

ಇದೇ ತಿಂಗಳ 22ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್​​​ ವಿರುದ್ಧದ ಟೆಸ್ಟ್​​ ಸರಣಿಗಾಗಿ ಆಟಗಾರರು ತಯಾರಿ ನಡೆಸ್ತಿದ್ದಾರೆ. ಎಲ್ಲಾ ಆಟಗಾರರು ಪ್ರದರ್ಶನದ ಬಗ್ಗೆ ಹೆಚ್ಚು ತಲೆ ಕೆಡಿಸ್ಕೊಳ್ತಿದ್ರೆ, ವಿರಾಟ್​​ ಮಾತ್ರ ಮೈದಾನದಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಅನ್ನೋ ಯೋಚನೆಯಲ್ಲಿದ್ದಾರೆ. 

ಹೊಸ ಲುಕ್​​ನೊಂದಿಗೆ ಕಿವೀಸ್​​ ಸರಣಿಯಲ್ಲಿ ಕೊಹ್ಲಿ ಕಣಕ್ಕೆ ಇಳಿಯಲಿದ್ದಾರೆ. ಕಿವೀಸ್​​ ಸರಣಿಗಾಗಿ ವಿರಾಟ್​​​ ಮಾಡಿಸ್ಕೊಂಡಿರೋ ಹೇರ್​​ ಸ್ಟೈಲ್​​​ಗೆ ಬರೋಬ್ಬರಿ 3 ತಾಸು ಹಿಡಿದಿದೆಯಂತೆ. ಅಪೇನಿ ಜಾರ್ಜ್‌ಎಂಬ ಖ್ಯಾತ ಹೇರ್‌ ಸ್ಟೈಲ್‌ ವಿನ್ಯಾಸಕಿ ವಿರಾಟ್‌ ಅವರ ಕೇಶ ವಿನ್ಯಾಸ ಮಾಡಿದ್ದಾರೆ. ಅಪೇನಿ ಈ ಹಿಂದೆ ಯುವರಾಜ್‌ ಸಿಂಗ್‌ ಅವರಿಗೂ ವಿನ್ಯಾಸ ಮಾಡಿದ್ದರು. ಅಷ್ಟೆ ಅಲ್ಲ, ಬಾಲಿವುಡ್​​ನ ಸಾಕಷ್ಟು ಸ್ಟಾರ್​​ ನಟರುಗಳಿಗೆ ಇವರೇ ಕೇಶ ವಿನ್ಯಾಸ ಮಾಡೋದು. 

ಈ ಹಿಂದೆಲ್ಲ ವಿರಾಟ್​​ ಸಪ್ನಾ ಭಾವನಾನಿ ಬಳಿಯೇ ಕೇಶ ವಿನ್ಯಾಸ ಮಾಡಿಸ್ಕೊಳ್ತಿದ್ದರು. ಆದರೆ, ಈ ಸಲ ವಿನ್ಯಾಸಕಿಯನ್ನು ಚೇಂಜ್​​ ಮಾಡ್ಕೊಂಡಿದ್ದಾರೆ. ಇದಕ್ಕಾಗಿ ವಿರಾಟ್​​ ಎಷ್ಟು ಖರ್ಚು ಮಾಡಿದ್ದಾರೆ ಅನ್ನೋದನ್ನು ಹೇಳ್ಕೊಂಡಿಲ್ಲ. ಆದ್ರೆ, ಅಪೇನಿ ಜಾರ್ಜ್‌ಮಾತ್ರ ಕೊಹ್ಲಿಗೆ ಹೊಸ ಲುಕ್​​ ಕುಟ್ಟಿದ್ದಾರೆ. ಈ ಬಗ್ಗೆ ಖುಷಿಯಾಗಿರೋ ಅವ್ರು, ಇಬ್ಬರು ಜೊತೆಯಲ್ಲಿ ಇರೋ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಷ್ಯ ತಿಳಿಸಿದ್ದಾರೆ. 

ಕೊಹ್ಲಿ ಹೀಗೆ ಕೇಶವಿನ್ಯಾಸವನ್ನು ಬದಲಾಯಿಸಿಕೊಳ್ತಿರೋದು ಇದೇ ಮೊದಲೇನಲ್ಲ. ಪ್ರತಿ ಸರಣಿಗೂ ಮುನ್ನ ಅವ್ರು ಹೊಸ ಲುಕ್​​ನಲ್ಲಿ ಎಂಟ್ರಿ ಕೊಡ್ತಾರೆ. ಕಳೆದ ವಿಂಡೀಸ್​​ ಸರಣಿಗೂ ಮುನ್ನ ಕೇಶ ವಿನ್ಯಾಸ ಮಾಡ್ಕೊಂಡಿದ್ದ ಅವ್ರು, ಅಭಿಮಾನಿಗಳಿಗೆ ಟ್ವೀಟರ್​​ ಮೂಲಕ ತಿಳಿಸಿದ್ರು. ವಿಂಡೀಸ್​​ ಸರಣಿ ಮಾತ್ರವಲ್ಲ, ಐಪಿಎಲ್​​, ವಿಶ್ವಕಪ್​​, ಟಿ20 ವಿಶ್ವಕಪ್​​, ಆಸೀಸ್​​ ಟೂರ್​​ ಹೇಗೆ ದೊಡ್ಡ ಪಟ್ಟಿಯನ್ನೇ ಮಾಡ್ಬಹುದು. ಹಾಗೆಲ್ಲ ಅವ್ರು, ತಮ್ಮ ಹೇರ್​​​ ಸ್ಟೈಲ್​​​ ಚೇಂಜ್​​ ಮಾಡ್ಕೊಂಡಿದ್ದಾರೆ. 

ವಿರಾಟ್​​​ ಹೀಗೆ ಕೇಶವಿನ್ಯಾಸವನ್ನು ಬದಲಾಯಿಸಿಕೊಳ್ಳೊದು ಟೀಮ್​​ ಇಂಡಿಯಾಗೆ ಬಂದ್ಮೇಲೆ ಶುರುವಾದುದಲ್ಲ. ಬಾಲ್ಯದಿಂದಲೂ ಅವ್ರಿಗೆ ಹೇರ್​​ ಸ್ಟೈಲ್​​ ಬಗ್ಗೆ ಸಾಕಷ್ಟು ಕಾಳಜಿ ಇದೆ. ಇದಕ್ಕೆ ಅವ್ರು ಹಳೇ ಫೋಟೋಗಳೇ ಸಾಕ್ಷಿ. ಆದ್ರೆ, ಪದೇ ಪದೇ ಬದಲಿಸೋಕೆ ಸಾಕಷ್ಟು ಅವಕಾಶ ಇರುತ್ತಿರಲಿಲ್ವಂತೆ. 

ವಿರಾಟ್​​ ಅವ್ರ ಈ ಹೊಸ ಹೇರ್​​ ಸ್ಟೈಲ್​ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಒಂದೇ ಒಂದು ಫೋಟೋದಲ್ಲಿ ಹೇರ್​​ಸ್ಟೈಲ್​​ ನೋಡಿರೋ ಅಭಿಮಾನಿಗಳು ಟೋಟಲ್​​ ಗೆಟಪ್​​​ ನೋಡಲಿಕ್ಕೆ ಕಾತುರರಾಗಿದ್ದಾರೆ. ಆದ್ರೆ, ಇದಕ್ಕಾಗಿ ಅವ್ರು, ಕಿವೀಸ್​​ ವಿರುದ್ಧ ವಿರಾಟ್​ ಮೈದಾನಕ್ಕೆ ಇಳಿಯೋವರಗೆ ಕಾಯಬೇಕು ಅಂತ ಕಾಣುತ್ತೆ.