ಒಂದಾದ ಮೇಲೆ ಒಂದರಂತೆ ಮುರಿಯುತ್ತಿರುವ ವಿರಾಟ್ ಕೊಹ್ಲಿ, ಗಾಲೆ ಟೆಸ್ಟ್‌ನಲ್ಲೂ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ.

ಸಚಿನ್ ತೆಂಡುಲ್ಕರ್‌ರ ದಾಖಲೆಗಳನ್ನು ಒಂದಾದ ಮೇಲೆ ಒಂದರಂತೆ ಮುರಿಯುತ್ತಿರುವ ವಿರಾಟ್ ಕೊಹ್ಲಿ, ಗಾಲೆ ಟೆಸ್ಟ್‌ನಲ್ಲೂ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ. ನಾಯಕನಾಗಿ ಭಾರತದಾಚೆ ಅತಿ ವೇಗವಾಗಿ 1000ರನ್ ಪೂರೈಸಿದ ವಿರಾಟ್, ಈ ಮೈಲಿಗಲ್ಲು ಸ್ಥಾಪಿಸಲು ಕೇವಲ 17 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು. ಸಚಿನ್ 19 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ್ದರು. ಭಾರತದಾಚೆ 1000 ರನ್ ಬಾರಿಸಿದ ಭಾರತದ ೭ನೇ ನಾಯಕ ಕೊಹ್ಲಿ.