Asianet Suvarna News Asianet Suvarna News

’ರಾಹುಲ್ ಔಟ್ ಆಗಲು ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ’ - ಕೋಚ್

ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಪೃಥ್ವಿ ಶಾ ಸೇರಿದಂತೆ ಭಾರತದ ಐವರು ಬ್ಯಾಟ್ಸ್’ಮನ್’ಗಳು ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ರಾಹುಲ್ ಮಾತ್ರ ಅದೇ ಚಾಳಿಯನ್ನೇ ಮುಂದುವರೆಸಿದ್ದಾರೆ. 

KL Rahul is finding new ways to get himself out Says Sanjay Bangar
Author
Sydney NSW, First Published Nov 30, 2018, 11:20 AM IST
  • Facebook
  • Twitter
  • Whatsapp

ಸಿಡ್ನಿ[ನ.30]: ಆಸ್ಪ್ರೇಲಿಯಾದಲ್ಲಿ ಟಿ20 ಸರಣಿ ಬಳಿಕ ಅಭ್ಯಾಸ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ವಿರುದ್ಧ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಭ್ಯಾಸ ಪಂದ್ಯದಲ್ಲಿ ರಾಹುಲ್‌ ಕೇವಲ 3 ರನ್‌ಗೆ ಔಟಾದ ನಂತರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಗರ್‌, ‘ರಾಹುಲ್‌ ಔಟ್‌ ಆಗಲು ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಅನವಶ್ಯಕವಾಗಿ ಆಫ್‌ಸ್ಟಂಪ್‌ನಿಂದ ಆಚೆ ಹೋಗುವ ಎಸೆತಗಳನ್ನು ಕೆಣಕಿ ವಿಕೆಟ್‌ ಚೆಲ್ಲುತ್ತಿದ್ದಾರೆ. ಆದರೆ ಕೇವಲ ಒಂದೇ ಒಂದು ದೊಡ್ಡ ಇನ್ನಿಂಗ್ಸ್‌ ಅವರು ಆತ್ಮವಿಶ್ವಾಸ ಮರಳಿ ಪಡೆಯುವಂತೆ ಮಾಡಲಿದೆ. ಆ ದಿನವನ್ನು ಎದುರು ನೋಡುತ್ತಿದ್ದೇವೆ’ ಎಂದರು.

ತ್ರಿಮೂರ್ತಿಗಳಲ್ಲಿ ಯಾರು ಬೆಸ್ಟ್ ಓಪನರ್..?

ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಪೃಥ್ವಿ ಶಾ ಸೇರಿದಂತೆ ಭಾರತದ ಐವರು ಬ್ಯಾಟ್ಸ್’ಮನ್’ಗಳು ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ರಾಹುಲ್ ಮಾತ್ರ ಅದೇ ಚಾಳಿಯನ್ನೇ ಮುಂದುವರೆಸಿದ್ದಾರೆ. 

Follow Us:
Download App:
  • android
  • ios