ಮುಂಬೈ ರಣಜಿ ತಂಡವು 500ನೇ ಐತಿಹಾಸಿಕ ಪಂದ್ಯವನ್ನಾಡಿತು. ಬರೋಡದ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಬಹುತೇಕ ಸೋಲಿನ ದವಡೆಯಲ್ಲಿತ್ತು. ಆ ವೇಳೆ ಮುಂಬೈ ಪರ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಅಭಿಷೇಕ್ ನಾಯರ್ 108 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತೆ ಮಾಡಿದರು.
ಬೆಂಗಳೂರು(ನ.12): ಬೆಂಗಳೂರು ಹಾಗೂ ಡೆಲ್ಲಿ ನಡುವಿನ ಪಂದ್ಯವೂ ಸೇರಿದಂತೆ ಒಟ್ಟು 9 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ಅದರಲ್ಲೂ ಮುಂಬೈ ರಣಜಿ ತಂಡವು 500ನೇ ಐತಿಹಾಸಿಕ ಪಂದ್ಯವನ್ನಾಡಿತು. ಬರೋಡದ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಬಹುತೇಕ ಸೋಲಿನ ದವಡೆಯಲ್ಲಿತ್ತು. ಆ ವೇಳೆ ಮುಂಬೈ ಪರ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಅಭಿಷೇಕ್ ನಾಯರ್ 108 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತೆ ಮಾಡಿದರು.
ಒಟ್ಟಾರೆ ರಣಜಿ ಕ್ವಿಕ್ ಕವರೇಜ್ ನಿಮ್ಮ ಮುಂದೆ:
ಗುಜರಾತ್ ವಿರುದ್ಧ ಸೌರಾಷ್ಟ್ರಕ್ಕೆ 3 ಅಂಕ:
ಚೇತೇಶ್ವರ್ ಪೂಜಾರ ಮೊದಲ ಇನಿಂಗ್ಸ್'ನಲ್ಲಿ ಬಾರಿಸಿದ 182 ರನ್'ಗಳ ನೆರವಿನಿಂದ ಸೌರಾಷ್ಟ್ರ 570 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಗುಜರಾತ್ 413 ರನ್ ಬಾರಿಸಿ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಸೌರಾಷ್ಟ್ರ 3 ಅಂಕ ಗಳಿಸಿತು.
500ನೇ ಐತಿಹಾಸಿಕ ಪಂದ್ಯದಲ್ಲಿ ಸೋಲು ತಪ್ಪಿಸಿಕೊಂಡ ಮುಂಬೈ:
ರಣಜಿ ಕ್ರಿಕೆಟ್ ಸಾಮ್ರಾಟ ಮುಂಬೈ ತಂಡ ತನ್ನ 500ನೇ ಐತಿಹಾಸಿಕ ಪಂದ್ಯದಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ ಬರೋಡ ತಂಡದ ಮಾರಕ ದಾಳಿಗೆ ತತ್ತರಿಸಿದ ಮುಂಬೈ ತಂಡ 171 ರನ್'ಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬರೋಡ 575/9 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ 104/4 ರನ್'ಗಳೊಂದಿಗೆ ಕೊನೆಯ ದಿನದಾಟ ಆರಂಭಿಸಿದ ಮುಂಬೈ ಬ್ಯಾಟ್ಸ್'ಮನ್'ಗಳು ನೆಲಕಚ್ಚಿ ಆಡುವ ಮೂಲಕ (ರಹಾನೆ: 45 ರನ್-134 ಎಸೆತ, ಸೂರ್ಯ ಕುಮಾರ್ ಯಾದವ್ 44 ರನ್- 132 ಎಸೆತ, ಸಿದ್ದಾರ್ಥ್ ಲಾಡ್ 71 ರನ್- 238 ಎಸೆತ ಹಾಗೂ ಅಭಿಷೇಕ್ ನಾಯರ್ 08 ರನ್ 108 ಎಸೆತ) 260/7 ರನ್'ಗೆ ಕೊನೆಯ ದಿನದಾಟ ಮುಗಿಸಿ ಡ್ರಾ ಮಾಡಿಕೊಂಡರು.
ಉಳಿದ ಪಂದ್ಯಗಳ ಫಲಿತಾಂಶ:
ಓಡಿಶಾ Vs ತಮಿಳುನಾಡು- ಡ್ರಾ
ಛತ್ತೀಸ್'ಗಡ್ Vs ಹಿಮಾಚಲ ಪ್ರದೇಶ- ಛತ್ತೀಸ್'ಗಡಕ್ಕೆ ಇನಿಂಗ್ಸ್ 114 ರನ್'ಗಳ ಜಯ
ಜಮ್ಮು ಮತ್ತು ಕಾಶ್ಮೀರ Vs ಜಾರ್ಖಂಡ್ - ಜಮ್ಮು ಮತ್ತು ಕಾಶ್ಮೀರಕ್ಕೆ 106 ರನ್'ಗಳ ಜಯ
ಬೆಂಗಾಲ್ Vs ವಿದರ್ಭ - ವಿದರ್ಭಕ್ಕೆ 10 ವಿಕೆಟ್'ಗಳ ಜಯ
ಮಹಾರಾಷ್ಟ್ರ Vs ರೈಲ್ವೇಸ್ - ಡ್ರಾ
ಸರ್ವೀಸಸ್ Vs ಗೋವಾ - ಡ್ರಾ
ಹರ್ಯಾಣ Vs ರಾಜಸ್ಥಾನ - ಡ್ರಾ
ತ್ರಿಪುರ Vs ಆಂಧ್ರ - ಡ್ರಾ
