ಭುಜದ ನೋವಿನಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಹಾಗೂ ಐಪಿಎಲ್'ನಿಂದ ಹೊರಗುಳಿದಿದ್ದ ರಾಹುಲ್. ಇದೀಗ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಅಭ್ಯಾಸ ನಡೆಸುತ್ತಿದ್ದಾರೆ.         

ಬೆಂಗಳೂರು(ಜು.13): ಭಾರತ ತಂಡದ ಆರಂಭಿಕ ಬ್ಯಾಟ್ಸ್'ಮನ್ ಕರ್ನಾಟಕದ ಕೆ.ಎಲ್ ರಾಹುಲ್ ಸಾಮಾಜಿಕ ಜಾಲತಾಣವಾದ ಫೇಸ್'ಬುಕ್'ನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ.

ಜೂನ್ ತಿಂಗಳೊಂದರಲ್ಲೇ ರಾಹುಲ್, ಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಮಾತ್ರವಲ್ಲದೇ ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್, ಶಿಖರ್ ಧವನ್ ಅವರನ್ನು ಹಿಂದಿಕ್ಕಿದ್ದಾರೆಂದು ವರದಿಯಾಗಿದೆ.

ಭುಜದ ನೋವಿನಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಹಾಗೂ ಐಪಿಎಲ್'ನಿಂದ ಹೊರಗುಳಿದಿದ್ದ ರಾಹುಲ್. ಇದೀಗ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಅಭ್ಯಾಸ ನಡೆಸುತ್ತಿದ್ದಾರೆ.