Asianet Suvarna News Asianet Suvarna News

RCB ಪಡೆಗೆ ನೈಟ್'ರೈಡರ್ಸ್ ಸವಾಲು; ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

ಎಬಿಡಿ, ಡಿಕಾಕ್, ಮೆಕ್ಕಲಂ ಹಾಗೂ ವೋಕ್ಸ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಸಹಜವಾಗಿಯೇ ರನ್ ಮಷಿನ್ ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಿದೆ. ಕೆಕೆಆರ್‌ಗೆ ಸ್ಟಾರ್ಕ್ ಅನುಪಸ್ಥಿತಿ ಕಾಡಲಿದ್ದು, ಲಿನ್ ಹಾಗೂ ರಸೆಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನರೇನ್ ಬೌಲಿಂಗ್ ಶೈಲಿ ಬದಲಿಸಿದ್ದು ಮೊದಲಿನಷ್ಟೇ ಪ್ರಭಾವಿಯಾಗಲಿದ್ದಾರಾ ಎನ್ನುವ ಬಗ್ಗೆ ಅನುಮಾನವಿದೆ. ಉತ್ತಪ್ಪ, ಕುಲ್ದೀಪ್ ಮೇಲೆ ತಂಡ ಅವಲಂಬಿತಗೊಂಡಿದೆ.

KKR vs RCB Who will be the winner of today IPL 2018 match

ಕೋಲ್ಕತಾ: 2017ರ ಆವೃತ್ತಿಯಲ್ಲಿ ಕೇವಲ 3 ಗೆಲುವುಗಳೊಂದಿಗೆ ಕೊನೆ ಸ್ಥಾನಕ್ಕೆ ಕುಸಿದಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ, ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಆರಂಭಿಕ ಪಂದ್ಯದಲ್ಲೇ ಕೊಹ್ಲಿ ಪಡೆಗೆ ಕಠಿಣ ಸವಾಲು ಎದುರಾಗಲಿದ್ದು, 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್‌ ಸವಾಲನ್ನು ಅದರ ತವರಿನಲ್ಲಿ ಸ್ವೀಕರಿಸಲಿದೆ.

ಗೌತಮ್ ಗಂಭೀರ್ ಯುಗದಿಂದ ಹೊರಬಂದು ಹೊಸದಾಗಿ ಅಭಿಯಾನ ಆರಂಭಿಸಲು ಕೆಕೆಆರ್ ಕಾತರಿಸುತ್ತಿದ್ದು, ತಿಂಗಳ ಹಿಂದಷ್ಟೇ ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ತ್ರಿಕೋನ ಟಿ20 ಸರಣಿ ಗೆಲ್ಲಿಸಿಕೊಟ್ಟಿದ್ದ ದಿನೇಶ್ ಕಾರ್ತಿಕ್ ತಂಡದ ಸಾರಥ್ಯ ವಹಿಸಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ೨ ಪಂದ್ಯಗಳಲ್ಲೂ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿ ಸೇಡಿಗಾಗಿ ಕಾಯುತ್ತಿದೆ. ಮೆಕ್ಕಲಂ, ಎಬಿಡಿ, ಡಿಕಾಕ್, ವೋಕ್ಸ್, ಅಲಿ, ಕೋರಿ ಆ್ಯಂಡರ್‌ಸನ್, ಡಿಗ್ರಾಂಡ್ ಹೋಮ್, ಸೌಥಿ ಹೀಗೆ ತಾರಾ ಅಂತಾರಾಷ್ಟ್ರೀಯ ಆಟಗಾರರ ಉಪಸ್ಥಿತಿ ತಂಡಕ್ಕೆ ಆಯ್ಕೆ ಗೊಂದಲ ಸೃಷ್ಟಿಸಲಿದೆ.

ಎಬಿಡಿ, ಡಿಕಾಕ್, ಮೆಕ್ಕಲಂ ಹಾಗೂ ವೋಕ್ಸ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಸಹಜವಾಗಿಯೇ ರನ್ ಮಷಿನ್ ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಿದೆ. ಕೆಕೆಆರ್‌ಗೆ ಸ್ಟಾರ್ಕ್ ಅನುಪಸ್ಥಿತಿ ಕಾಡಲಿದ್ದು, ಲಿನ್ ಹಾಗೂ ರಸೆಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನರೇನ್ ಬೌಲಿಂಗ್ ಶೈಲಿ ಬದಲಿಸಿದ್ದು ಮೊದಲಿನಷ್ಟೇ ಪ್ರಭಾವಿಯಾಗಲಿದ್ದಾರಾ ಎನ್ನುವ ಬಗ್ಗೆ ಅನುಮಾನವಿದೆ. ಉತ್ತಪ್ಪ, ಕುಲ್ದೀಪ್ ಮೇಲೆ ತಂಡ ಅವಲಂಬಿತಗೊಂಡಿದೆ.

ಸಮಯ: ರಾತ್ರಿ 08ಕ್ಕೆ; ಸ್ಥಳ: ಈಡನ್ ಗಾರ್ಡನ್ ; ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1, ಸುವರ್ಣ ಪ್ಲಸ್(ಕನ್ನಡ)

Follow Us:
Download App:
  • android
  • ios