ರಾಜಸ್ಥಾನವನ್ನು ರೋಚಕವಾಗಿ ಮಣಿಸಿದ್ದ ಅಶ್ವಿನ್ ಪಡೆಗೆ, ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಶಾಕ್ ಕೊಡಲು ಸಜ್ಜಾಗಿದೆ. ಟಾಸ್ ಗೆದ್ದ ಪಂಜಾಬ್ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಕೋಲ್ಕತಾ[ಮಾ.27]: ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಈಡನ್’ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಕೋಲ್ಕತಾ ನೈಟ್’ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ದುಕೊಂಡಿದೆ.

Scroll to load tweet…

ಈಗಾಗಲೇ ಆಡಿದ ಮೊದಲ ಪಂದ್ಯವನ್ನು ಗೆದ್ದಿರುವ ಉಭಯ ತಂಡಗಳು ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿವೆ. ರಾಜಸ್ಥಾನವನ್ನು ರೋಚಕವಾಗಿ ಮಣಿಸಿದ್ದ ಅಶ್ವಿನ್ ಪಡೆಗೆ, ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಶಾಕ್ ಕೊಡಲು ಸಜ್ಜಾಗಿದೆ.

ಪಂಜಾಬ್ ಕೆಲವು ಬದಲಾವಣೆಯೊಂದಿಗೆ ಕಣಕ್ಕಳಿದಿದ್ದು, ಡೇವಿಡ್ ಮಿಲ್ಲರ್, ವಿಲ್’ಜೋನ್ ಹಾಗೂ ವರುಣ್ ಚಕ್ರವರ್ತಿ ತಂಡ ಕೂಡಿಕೊಂಡಿದ್ದಾರೆ.

ತಂಡಗಳು ಹೀಗಿವೆ:

ಕೆಕೆಆರ್:

Scroll to load tweet…

ಕಿಂಗ್ಸ್ ಇಲೆವನ್ ಪಂಜಾಬ್:

Scroll to load tweet…