ಖೇಲೋ ಇಂಡಿಯಾ ಶಾಲಾ ಪಂದ್ಯಗಳು ಜನವರಿ 31ರಿಂದ ಆರಂಭವಾಗಲಿದೆ.
ನವದೆಹಲಿ(ಜ.09): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಖೇಲೋ ಇಂಡಿಯಾ’ದ ಲಾಂಛನವನ್ನು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅನಾವರಣಗೊಳಿಸಿದರು.
ದೈಹಿಕ ಕ್ಷಮತೆ ಹಾಗೂ ಸ್ಪರ್ಧಾತ್ಮಕತೆಯನ್ನು ಲಾಂಛನ ಬಿಂಬಿಸುತ್ತಿದ್ದು, ರಾಷ್ಟ್ರಧ್ವಜದಲ್ಲಿರುವ ಬಣ್ಣಗಳನ್ನೊಳಗೊಂಡಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ನೂತನ ಭಾರತದತ್ತ ದಾಪುಗಾಲಿಡುತ್ತಿದ್ದೇವೆ. ಪ್ರತಿಯೊಬ್ಬರೂ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂಬುದು ಪ್ರಧಾನಿಯ ಆಸೆಯಾಗಿದೆ. ಅಲ್ಲದೇ ದೇಶದಲ್ಲಿ ಕ್ರೀಡಾ ಸಂಸ್ಕೃತಿ ವೃದ್ಧಿಸಬೇಕೆಂಬುದು ನಮ್ಮೆಲ್ಲರ ಆಶಯ’ ಎಂದು ರಾಜ್ಯವರ್ಧನ್ ತಿಳಿಸಿದರು.
ಖೇಲೋ ಇಂಡಿಯಾ ಶಾಲಾ ಪಂದ್ಯಗಳು ಜನವರಿ 31ರಿಂದ ಆರಂಭವಾಗಲಿದೆ.
