ತಿರುವನಂತಪುರಂ(ಆ.22): ಕೇರಳ ಪ್ರವಾಹಕ್ಕೆ ಸಿಲುಕಿ 350ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 3.5 ಲಕ್ಷ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೀಕರ ಪ್ರವಾಹ ಕೇರಳ ಬಹುತೇಕ ಎಲ್ಲಾ ಜನರನ್ನ ತಟ್ಟಿದೆ. ಇದಕ್ಕೆ ಟೀಂ ಇಂಡಿಯಾ ಎ ಕ್ರಿಕೆಟಿಗ ಕೂಡ ಹೊರತಾಗಿಲ್ಲ.

ಭಾರತ ಬ್ಲೂ ತಂಡಕ್ಕೆ ಆಯ್ಕೆಯಾಗಿರುವ ಕೇರಳ ವೇಗಿ ಬಸಿಲ್ ಥಂಪಿ ಕೇರಳ ಪ್ರವಾಹದಿಂದ ಪರದಾಡುವ ಸ್ಥಿತಿ ಎದುರಾಗಿದೆ. ಮಧುರೈನಲ್ಲಿ ಆಯೋಜಿಸಲಾಗಿರುವ ದುಲೀಪ್ ಟ್ರೋಫಿ ಟೂರ್ನಿಗೆ ತೆರಳಲು ಬಸಿಲ್ ಥಂಪಿಗೆ ಪ್ರಯಾಸ ಪಡಬೇಕಾಯಿತು.

ಕೇರಳ ವಿಮಾನಯಾನ ಸೌಲಭ್ಯ ಹಾಗೂ ರೈಲು ಪ್ರಯಾಣ ಈಗಾಗಲೇ ರದ್ದುಗೊಳಿಸಲಾಗಿದೆ.  ಮಂಗಳವಾರ ತಂಡ ಸೇರಿಕೊಳ್ಳಬೇಕಿದ್ದ ಬಸಿಲ್ ಥಂಪಿ, ಇದೀಗ ದಾರಿ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಕೇರಳದ ಬಹುತೇಕ ದಾರಿಗಳು ಬಿರುಕು ಬಿಟ್ಟು ಸಂಪೂರ್ಣ ಹಾಳಾಗಿವೆ. ಇಷ್ಟಾದರೂ ಥಂಪಿ ಬೇರೆ ಮಾರ್ಗವಿಲ್ಲದೆ ಬಸ್ ಪ್ರಯಾಣ ಮಾಡಿದ್ದಾರೆ.

ಮಂಗಳವಾರ ತಂಡ ಸೇರಿಕೊಳ್ಳಬೇಕಿದ್ದ ಥಂಪಿ ಇದೀಗ ಇಂದು(ಭುದವಾರ) ತಡ ರಾತ್ರಿ ಮಧುರೈ ತಲುಪಲಿದ್ದಾರೆ. ಈ ಕುರಿತು ಭಾರತ ಬ್ಲೂ ತಂಡದ ನಾಯಕ ಫೈಯಜ್ ಫೈಜಲ್ ಪ್ರತಿಕ್ರಿಯೆ ನೀಡಿದ್ದಾರೆ. ಬಸಿಲ್ ಥಂಪಿ ಪ್ರಯಾಣ ಸಮಸ್ಯೆಯಿಂದ ತಡವಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.