ಚಲನ ಚಿತ್ರ ಕಪ್: ಕಿಚ್ಚ ಸುದೀಪ್ ಪಡೆ ಮಣಿಸಿದ ಗಣೇಶ್ ಟೀಂ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Sep 2018, 4:12 PM IST
KCC cup 2018 Golden star Ganesh team beat Kicha Sudeep
Highlights

ಕರ್ನಾಟಕ ಚಲನಚಿಕ್ರ ಕಪ್ ಟೂರ್ನಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ಸ್ಯಾಂಡಲ್‌ವುಡ್ ನಟರು ಹಾಗೂ ಮಾಜಿ ಕ್ರಿಕೆಟಿಗರು ಸೇರಿದಂತೆ ಸ್ಟಾರ್ ಸೆಲೆಬ್ರೆಟಿ ಹೊಂದಿರುವ ಕೆಸಿಸಿ ಕಪ್ ಟೂರ್ನಿಯ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು(ಸೆ.08): ಕರ್ನಾಟಕ ಚಲನ ಚಿತ್ರ ಕಪ್ ಟಿ10 ಕ್ರಿಕೆಟ್ ಟೂರ್ನಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ಕೊನೆ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.

ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ನೀಡಿದ್ದ 122 ರನ್‌ಗಳ ಗುರಿಯನ್ನ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸೋ ಮೂಲಕ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಮೊದಲ ಗಣೇಶ್ ತಂಡ ಶುಭಾರಂಭ ಮಾಡಿತು.

ಇದಕ್ಕೂ ಮೊದಲು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೇವಲ 17 ಎಸೆತಗಳಲ್ಲಿ 29 ರನ್ ಸಿಡಿಸೋ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ಮನರಂಜನೆ ನೀಡಿದರು.

ಟೂರ್ನಿ ಉದ್ಘಾಟನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಎರಡು ತಂಡಗಳ ಆಟಗಾರರಿಗೆ ಶುಭಕೋರಿದರು. 

loader