ಕವಿತಾ ಪೂರ್ಣ ಪ್ರಮಾಣದಲ್ಲಿ ದೇಹ ಮುಚ್ಚುವ ಬಟ್ಟೆಗಳನ್ನು ಧರಿಸಿ ಸ್ಪರ್ಧೆಗಿಳಿದು ಭರ್ಜರಿಯಾಗಿ ಫೈಟ್ ಮಾಡಿರುವ ವಿಡಿಯೋವೀಗ ವೈರಲ್ ಆಗುತ್ತಿದೆ. ಕೇವಲ 5 ದಿನದಲ್ಲಿ ಈ ವಿಡಿಯೋವನ್ನು ಮೂರು ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ನವದೆಹಲಿ(ಸೆ.05): ಡಬ್ಲೂಡಬ್ಲೂಇ ಮಹಿಳಾ ಕುಸ್ತಿಪಟು ಭಾರತದ ಕವಿತಾ ದೇವಿ, ಇತ್ತೀಚೇಗಷ್ಟೇ ಎಂಎಇ ಯಂಗ್ ಚಾಲೆಂಜ್ ಸ್ಪರ್ಧೆಯಲ್ಲಿ ಸೆಣಸಿದ ವಿಡಿಯೋ ವೈರಲ್ ಆಗಿದೆ.
ಈ ಸೆಣಸಾಟದಲ್ಲಿ ಕವಿತಾ ದೇವಿ ಸೆಲ್ವಾರ್ ಕಮೀಜ್ ಧರಿಸಿದ್ದರು. ಸಾಮಾನ್ಯವಾಗಿ ಡಬ್ಲೂಡಬ್ಲೂಇ ಕುಸ್ತಿಯಲ್ಲಿ ಸ್ಪರ್ಧಿಗಳು ಪ್ರೇಕ್ಷಕರನ್ನು ರಂಜಿಸುವ ಉದ್ದೇಶದಿಂದ ತುಂಡುಡುಗೆ ಬಟ್ಟೆಯಲ್ಲಿ ಕಣಕ್ಕಿಳಿಯುತ್ತಾರೆ. ಆದರೆ ಕವಿತಾ ಪೂರ್ಣ ಪ್ರಮಾಣದಲ್ಲಿ ದೇಹ ಮುಚ್ಚುವ ಬಟ್ಟೆಗಳನ್ನು ಧರಿಸಿ ಸ್ಪರ್ಧೆಗಿಳಿದು ಭರ್ಜರಿಯಾಗಿ ಫೈಟ್ ಮಾಡಿರುವ ವಿಡಿಯೋವೀಗ ವೈರಲ್ ಆಗುತ್ತಿದೆ. ಕೇವಲ 5 ದಿನದಲ್ಲಿ ಈ ವಿಡಿಯೋವನ್ನು ಮೂರು ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಭಾರತದ ಮಾಜಿ ಪವರ್'ಲಿಫ್ಟರ್ ಮತ್ತು ಎಂಎಂಎ ಫೈಟರ್ ಕವಿತಾ ಹರ್ಯಾಣ ಮೂಲದವರಾಗಿದ್ದಾರೆ. ಇಲ್ಲಿನ ಪೊಲೀಸ್ ಅಧಿಕಾರಿಯಾಗಿರುವ ಕವಿತಾ ಮಾಜಿ ಡಬ್ಲೂಡಬ್ಲೂಇ ಚಾಂಪಿಯನ್ ದ ಗ್ರೆಟ್ ಖಲಿ ಅವರ ಗರಡಿಯಲ್ಲಿ ಪಳಗಿದ್ದಾರೆ.
