ಬ್ಯಾಟಿಂಗ್ ಮಾಡುವಾಗ ಇಬ್ಬರು ಬ್ಯಾಟ್ಸ್ಮನ್ಗಳು ಗೇಮ್ ಪ್ಲಾನ್ ಬಗ್ಗೆ ಮಾತನಾಡುವುದು ಸಹಜ. ಆದರೆ ಎದುರಾಳಿಗೆ ಗೊತ್ತಿರುವ ಭಾಷೆಯಲ್ಲಿ ಮಾತನಾಡಿದರೆ ಅವರ ಯೋಜನೆ ಎದುರಾಳಿಗೆ ಗೊತ್ತಾಗಿಬಿಡುತ್ತೆ. ಹೀಗಾಗಿ ಎದುರಾಳಿಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಾರೆ.
ಚೆನ್ನೈ (ಡಿ. 20): ಬ್ಯಾಟಿಂಗ್ ಮಾಡುವಾಗ ಇಬ್ಬರು ಬ್ಯಾಟ್ಸ್ಮನ್ಗಳು ಗೇಮ್ ಪ್ಲಾನ್ ಬಗ್ಗೆ ಮಾತನಾಡುವುದು ಸಹಜ. ಆದರೆ ಎದುರಾಳಿಗೆ ಗೊತ್ತಿರುವ ಭಾಷೆಯಲ್ಲಿ ಮಾತನಾಡಿದರೆ ಅವರ ಯೋಜನೆ ಎದುರಾಳಿಗೆ ಗೊತ್ತಾಗಿಬಿಡುತ್ತೆ. ಹೀಗಾಗಿ ಎದುರಾಳಿಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಾರೆ.
ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ನಲ್ಲಿ ಬ್ಯಾಟಿಂಗ್ ವೇಳೆ ಕರುಣ್ ನಾಯರ್ ಮತ್ತು ಮುರಳಿ ವಿಜಯ್ ತಮಿಳಿನಲ್ಲಿ ಮಾತಾಡಿಕೊಳ್ಳುತ್ತಿದ್ದರು. ವಿಜಯ್ ತಮಿಳುನಾಡಿನವರು. ಕರುಣ್ ಕರ್ನಾಟಕದವರು. ನಾಯರ್ಗೆ ತಮಿಳು ಬರುವುದರಿಂದ ತಮಿಳಿನಲ್ಲೇ ವಿಜಯ್ ಕೆಲ ಸಲಹೆ ನೀಡುತ್ತಿದ್ದರು. ರಾಹುಲ್ ಮಾಡಿದ ತಪ್ಪನ್ನು ಕರುಣ್ ಮಾಡದಂತೆ ವಿಜಯ್ ಆಗಾಗ ಸಲಹೆ ಕೊಡುತ್ತಿದ್ದರು. ಈ ಸಲಹೆ ಮೇರೆಗೆ ಕರುಣ್ ಚೊಚ್ಚಲ ಶತಕ ಬಾರಿಸಿದ್ರು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಿದ್ರೆ ನಮ್ಮ ಗೇಮ್ ಪ್ಲಾನ್ ಇಂಗ್ಲೆಂಡ್ ಆಟಗಾರರಿಗೆ ತಿಳಿಯುತ್ತದೆ ಅನ್ನೋ ಕಾರಣಕ್ಕೆ ಈ ಪ್ಲಾನ್ ಮಾಡಿದ್ದರು.
