ಮಗ ಶತಕ ಸಿಡಿಸುವುದನ್ನು ನೋಡಲು ಬಂದಿದ್ದ ತಂದೆ, ತಾಯಿಗೆ ಅವರು ತ್ರಿಶತಕದ ಸಂಭ್ರಮವನ್ನು ಉಡುಗೊರೆಯಾಗಿ ನೀಡಿದರು.

ಕರುಣ್ ನಾಯರ್ ಅವರ ಕ್ರಿಕೆಟ್ ಪ್ರೇಮವನ್ನು ಪೋಷಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ತಾಯಿ ಪ್ರೇಮಾ ನಾಯರ್‌ಗೆ ಮಗನ ಬ್ಯಾಟಿಂಗ್ ಅನ್ನು ಎಂದೂ ನೇರವಾಗಿ ನೋಡಿಲ್ಲವಂತೆ! ‘ನೇರಪ್ರಸಾರದ ವೇಳೆ ಅವರು ಮಗನ ಬ್ಯಾಟಿಂಗ್ ನೋಡುವಾಗ ಸಿಕ್ಕಾಬಟ್ಟೆ ನರ್ವಸ್ ಆಗುತ್ತಾರೆ. ಹಾಗಾಗಿಯೇ, ಕರುಣ್ ಆಟವನ್ನು ರೆಕಾರ್ಡ್ ಮಾಡಿ ಆನಂತರ ಪ್ರೇಮಾರಿಗೆ ತೋರಿಸುತ್ತೇನೆ’ ಎನ್ನುತ್ತಾರೆ ಕರುಣ್ ನಾಯರ್ ತಂದೆ ಕಲಾಧರನ್ ನಾಯರ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಲಿ ನಡೆಯುತ್ತಿರುವ ಚೆನ್ನೈ ಟೆಸ್ಟ್ ಪಂದ್ಯದ ಮೂರನೇ ದಿನಾಂತ್ಯಕ್ಕೆ ಕರುಣ್ 71 ರನ್ ಗಳಿಸಿದ್ದಾಗ ಮಗ ಶತಕ ಸಿಡಿಸುತ್ತಾನೆಂಬ ಅದೆಂಥದ್ದೊ ಆತ್ಮವಿಶ್ವಾಸ ಕಲಾಧರನ್ ಅವರಲ್ಲಿ ಮೂಡಿತ್ತು. ಅದನ್ನು ಕಣ್ಣಾರೆ ನೋಡಬೇಕೆಂಬ ಹಂಬಲ ಮೂಡಿತ್ತಾದರೂ ಪ್ರೇಮಾ ಅವರನ್ನು ಮನೆಯಲ್ಲಿ ಬಿಟ್ಟು ಒಬ್ಬನೇ ಅದನ್ನು ಎಂಜಾಯ್ ಮಾಡುವ ಮನಸ್ಥಿತಿಯಲ್ಲಿ ಅವರಿರಲಿಲ್ಲ. ಹಾಗಾಗಿ, ಪ್ರೇಮಾ ಅವರನ್ನು ಜತೆಯಲ್ಲಿ ಬರಲು ಕೇಳಿಕೊಂಡಿದ್ದರು.

ಮಗನ ಆಟವನ್ನು ನೇರಪ್ರಸಾರದಲ್ಲೇ ನೋಡದವರು, ಕ್ರೀಡಾಂಗಣಕ್ಕೇ ಹೋಗಿ ನೋಡುತ್ತಾರೆಯೇ ? ಪ್ರೇಮಾ ಅವರು ಇಲ್ಲ ಎಂದುಬಿಟ್ಟರು. ಆದರೆ, ಕಲಾಧರನ್ ಅವರು ಪಟ್ಟು ಬಿಡಲಿಲ್ಲ. ‘‘ಮಗನ ಶತಕ ನೋಡುವುದಿಲ್ಲವೇ?’’, ‘‘ದಕ್ಷಿಣ ಭಾರತದಲ್ಲಿ ಮಗ ಆಡುತ್ತಿರುವ ಮೊಟ್ಟಮೊದಲ ಟೆಸ್ಟ್ ಪಂದ್ಯವಿದು, ಬರುವುದಿಲ್ಲವೆಂದರೆ ಹೇಗೆ?’’ ಎಂಬಿತ್ಯಾದಿ ಪ್ರಶ್ನೆಗಳನ್ನು ಎಸೆದು ಪ್ರೇಮಾ ಅವರನ್ನು ಹೊರಡಿಸಿದರು.

ಆದರೆ, ಕ್ರೀಡಾಂಗಣದಲ್ಲಿ ಅವರ ನಿರೀಕ್ಷೆಗೂ ಮೀರಿ ಕರುಣ್ ಬೆಳಗಿದರು. ಮಗ ಶತಕ ಸಿಡಿಸುವುದನ್ನು ನೋಡಲು ಬಂದಿದ್ದ ತಂದೆ, ತಾಯಿಗೆ ಅವರು ತ್ರಿಶತಕದ ಸಂಭ್ರಮವನ್ನು ಉಡುಗೊರೆಯಾಗಿ ನೀಡಿದರು.