ಬೆಂಗಳೂರು(ಅ.02): ಮನೀಶ್ ಪಾಂಡೆ ಭರ್ಜರಿ ಶತಕ ಹಾಗೂ ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಚತ್ತಿಸ್‌ಗಡ ವಿರುದ್ದ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ 79  ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ 4 ಪಂದ್ಯದಲ್ಲಿ 3 ಗೆಲುವು ಸಾಧಿಸೋ ಮೂಲಕ ಎಲೈಟ್ ಪೂಲ್ ಗುಂಪಿನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ: ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿತು. ಕೆಎಲ್ ರಾಹುಲ್ 81 ರನ್ ಸಿಡಿಸಿದರೆ, ಮನೀಶ್ ಪಾಂಡೆ 142 ರನ್ ಚಚ್ಚಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನಿಂದ ಕರ್ನಾಟಕ ಉತ್ತಮ ಮೊತ್ತ ಪೇರಿಸಿತು. 

ಇದನ್ನೂ ಓದಿ: BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

286 ರನ್ ಗುರಿ ಪಡೆದ ಚತ್ತೀಸ್‌ಗಡ ತಂಡಕ್ಕೆ ಪ್ರಸಿದ್ಧ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ಶಾಕ್ ನೀಡಿದರು. ಇಬ್ಬರು ತಲಾ 3 ವಿಕೆಟ್ ಪಡೆದರೆ, ರೋನಿತ್ ಮೊರೆ 2 ವಿಕೆಟ್ ಕಬಳಿಸಿದರು. ಕರ್ನಾಟಕ ತಂಡದ ಅತ್ಯುತ್ತಮ ದಾಳಿಗೆ ಕುಸಿದ ಚತ್ತೀಸ್‌ಗಡ 44.4 ಓವರ್‌ಗಳಲ್ಲಿ 206 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ ಕರ್ನಾಟಕ 79 ರನ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಕರ್ನಾಟಕ 4 ಅಂಕ ಪಡೆಯಿತು.