ಮುಷ್ತಾಕ್ ಅಲಿ ಟಿ20 : ಮುಂಬೈ ಮಣಿಸಿದ ಕರ್ನಾಟಕ

First Published 25, Jan 2018, 11:06 PM IST
Karnataka won by 7 wkts
Highlights

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಸಿದ್ದೇಶ್ ಲಾಡ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್'ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತು. ಕರ್ನಾಟಕ ಪರ ಬಿನ್ನಿ 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2 ಹಾಗೂ ಪ್ರಸಿದ್ದ ಕ್ರಿಷ್ಣ ಹಾಗೂ, ಮಿಥುನ್ ತಲಾ 1 ವಿಕೆಟ್ ಪಡೆದರು.

ಕೋಲ್ಕತಾ(ಜ.25): ಮಯಾಂಕ್ ಅಗರ್‌'ವಾಲ್‌ರ ಆಕರ್ಷಕ ಅರ್ಧಶತಕ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಸೂಪರ್ ಲೀಗ್ ನಾಕೌಟ್‌'ನ ಕೊನೆ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ 7 ವಿಕೆಟ್‌'ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಸಿದ್ದೇಶ್ ಲಾಡ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್'ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತು. ಕರ್ನಾಟಕ ಪರ ಬಿನ್ನಿ 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2 ಹಾಗೂ ಪ್ರಸಿದ್ದ ಕ್ರಿಷ್ಣ ಹಾಗೂ, ಮಿಥುನ್ ತಲಾ 1 ವಿಕೆಟ್ ಪಡೆದರು.

ಮುಂಬೈ ನೀಡಿದ ಗುರಿ ಬೆನ್ನಟ್ಟಿದ ಕರ್ನಾಟಕ ಕೇವಲ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಆರಂಭಿಕ ಬ್ಯಾಟ್ಸ್'ಮನ್ ಆರ್. ಸಮರ್ಥ್ ಮತ್ತೊಮ್ಮೆ ವಿಫಲವಾದರು. ಆದರೆ ಮತ್ತೋರ್ವ ಆರಂಭಿಕ ಮಯಾಂಕ್ ಅಗರ್'ವಾಲ್(77) ಹಾಗೂ ಪವನ್ ದೇಶ್'ಪಾಂಡೆ(48*) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಇನ್ನು ನಾಳೆ ನಡೆಯಲಿರುವ(ಜ.26) ಫೈನಲ್‌'ನಲ್ಲಿ ದೆಹಲಿ ಹಾಗೂ ರಾಜಸ್ಥಾನ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ಸಂಕ್ಷಿಪ್ತ ಸ್ಕೋರ್:

ಮುಂಬೈ: 175/8

ಸೂರ್ಯಕುಮಾರ್ ಯಾದವ್: 59

ಬಿನ್ನಿ: 36/3

ಕರ್ನಾಟಕ: 176/3

ಅಗರ್'ವಾಲ್: 77

ಧವಳ್ ಕುಲಕರ್ಣಿ: 36/2

loader