377 ರನ್'ಗಳ ಬೃಹತ್ ಟಾರ್ಗೆಟ್'ನೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡಕ್ಕೆ ಆರಂಭದಿಂದಲೇ ಗೌತಮ್ ಮುಳುವಾದರು. ಎದುರಾಳಿ ತಂಡದ ಯಾರೊಬ್ಬರು 40ರ ಗಡಿ ದಾಟಲಿಲ್ಲ.
ನವದೆಹಲಿ(ನ.28): ಕೆ.ಗೌತಮ್ ಸ್ಪಿನ್ ದಾಳಿಗೆ ಕಂಗಾಲಾದ ರೈಲ್ವೇಸ್ ಆಟಗಾರರು 167 ರನ್'ಗಳಿಗೆ ಸರ್ವಪತನವಾದರು. 72 ರನ್'ಗಳಿಗೆ 7 ವಿಕೇಟ್ ಕಿತ್ತ ಗೌತಮ್ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೊನೆಯ ದಿನವಾದ ಇಂದು 208/1 ರನ್'ಗಳಿಗೆ ಇನ್ನಿಂಗ್ಸ್ ಆರಂಭಿಸಿದ ರಾಜ್ಯ ತಂಡ 4 ವಿಕೇಟ್'ಗಳ ನಷ್ಟಕ್ಕೆ 275 ರನ್ ಪೇರಿಸಿ 376 ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತು. ಕೊನೆಯ ದಿನದಲ್ಲಿ ಮಾಯಾಂಕ್ ಅಗರ್'ವಾಲ್ 134, ಡಿ. ನಿಶ್ಚಲ್ 45 ಹಾಗೂ ಕರುಣ್ ನಾಯರ್ 20 ರನ್ ಬಾರಿಸಿದ್ದರು.
ಔಟಾದವೆಲ್ಲವೂ ಬೌಲ್ಡ್ ಹಾಗೂ ಎಲ್'ಬಿ
377 ರನ್'ಗಳ ಬೃಹತ್ ಟಾರ್ಗೆಟ್'ನೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡಕ್ಕೆ ಆರಂಭದಿಂದಲೇ ಗೌತಮ್ ಮುಳುವಾದರು. ಎದುರಾಳಿ ತಂಡದ ಯಾರೊಬ್ಬರು 40ರ ಗಡಿ ದಾಟಲಿಲ್ಲ. ಪ್ರಥಮ್ ಸಿಂಗ್ 36,ಮೃನಾಲ್ ದೇವ್'ದರ್ 24, ನಾಯಕ ಮಹೇಶ್ ರಾವತ್ 22 ಒಂದಿಷ್ಟು ಹೋರಾಟ ನಡೆಸಿದ್ದು ಬಿಟ್ಟರೆ ಉಳಿದವರ್ಯಾರು ಪ್ರತಿರೋಧ ತೋರಲಿಲ್ಲ.
ಗೌತಮ್ ಕಬಳಿಸಿದ 7 ವಿಕೇಟ್'ಗಳಲ್ಲಿ ನಾಲ್ವರನ್ನು ಬೌಲ್ಡ್ ಮಾಡಿದರೆ ಮೂವರನ್ನು ಎಲ್'ಬಿ ಬಲೆಗೆ ಕೆಡವಿರುವುದು ವಿಶೇಷ. ಉಳಿದ ಮೂವರನ್ನು ಶ್ರೇಯಸ್ ಇಬ್ಬರು ಹಾಗೂ ಮಿಥುನ್ ಒಬ್ಬರನ್ನು ಪೆವಿಲಿಯನ್'ಗೆ ಕಳಿಸಿದರು. ಎ ಗುಂಪಿನಲ್ಲಿ ನಾಲ್ಕು ಗೆಲುವು ಸಾಧಿಸಿದ ರಾಜ್ಯ ತಂಡ 32 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕ್ವಾರ್ಟ'ರ್ ಫೈನಲ್ ಪಂದ್ಯಗಳು ಡಿ.7ರಿಂದ ಆರಂಭವಾಗಲಿದ್ದು, ಎದುರಾಳಿ ತಂಡಗಳನ್ನು ಇನ್ನಷ್ಟೆ ಪ್ರಕಟಿಸಬೇಕಾಗಿದೆ.
ಸ್ಕೋರ್
ಕರ್ನಾಟಕ 434 ಹಾಗೂ 275/4
ರೈಲ್ವೇಸ್ 333 ಹಾಗೂ 167
ಫಲಿತಾಂಶ: ಕರ್ನಾಟಕಕ್ಕೆ 209 ರನ್'ಗಳ ಜಯ
ಪಂದ್ಯ ಪುರುಶೋತ್ತಮ: ಮಾಯಾಂಕ್ ಅಗರ್'ವಾಲ್
ಕ್ವಾರ್ಟ್'ರ್ ಫೈನಲ್ ಪಂದ್ಯಗಳು ಡಿ.7ರಿಂದ ಆರಂಭ
