ರಾಷ್ಟ್ರೀಯ ತಂಡದಲ್ಲಿ ಪ್ರಭಾವಿ ಪ್ರದರ್ಶನ ತೋರುತ್ತಿರುವ ಮನೀಶ್ ಪಾಂಡೆ ಹಾಗೂ ರಾಹುಲ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಬೆಂಗಳೂರು(ಅ.08): ಪ್ರಸಕ್ತ ರಣಜಿ ಟ್ರೋಫಿ ಪಂದ್ಯಾವಳಿಗಾಗಿ 16 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು ಸ್ಟಾರ್ ಆಟಗಾರರಾದ ಮನೀಶ್ ಪಾಂಡೆ, ಕರುಣ್ ನಾಯರ್, ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ.
ರಾಷ್ಟ್ರೀಯ ತಂಡದಲ್ಲಿ ಪ್ರಭಾವಿ ಪ್ರದರ್ಶನ ತೋರುತ್ತಿರುವ ಮನೀಶ್ ಪಾಂಡೆ ಹಾಗೂ ರಾಹುಲ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಬಾರಿ ಯುವ ಆಟಗಾರ ಶರತ್ ಶ್ರೀನಿವಾಸ್ ಅವರಿಗೆ 2ನೇ ವಿಕೆಟ್ ಕೀಪರ್ ರೂಪದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇನ್ನುಳಿದಂತೆ ಈ ಹಿಂದಿನ ಋತುವಿನಲ್ಲಿದ್ದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಎಂದಿನಂತೆ ಆರ್. ವಿನಯ್ ಕುಮಾರ್ ನಾಯಕರಾಗಿದ್ದಾರೆ.
‘ಎ’ ಗುಂಪಿನಲ್ಲಿರುವ ಕರ್ನಾಟಕ ತಂಡ ಅ.14 ರಂದು ಅಸ್ಸಾಂ ಎದುರು ಸೆಣಸಲಿದೆ.
ಕರ್ನಾಟಕ ತಂಡದ ಪಂದ್ಯಗಳು
* ಅ.14 ರಿಂದ 17 ಅಸ್ಸಾಂ ಎದುರು (ಮೈಸೂರು)
* ಅ.24 ರಿಂದ 27 ಹೈದರಾಬಾದ್ ವಿರುದ್ಧ (ಶಿವಮೊಗ್ಗ)
* ನ.1 ರಿಂದ 4 ಮಹಾರಾಷ್ಟ್ರ ಎದುರು (ಪುಣೆ)
* ನ.9 ರಿಂದ 12 ದೆಹಲಿ ವಿರುದ್ಧ (ಆಲೂರು-೨)
* ನ.17 ರಿಂದ 20 ಉತ್ತರ ಪ್ರದೇಶ ಎದುರು (ಕಾನ್ಪುರ)
* ನ.25 ರಿಂದ 28 ರೈಲ್ವೇಸ್ ವಿರುದ್ಧ (ರೈಲ್ವೇಸ್)
ತಂಡ:
ವಿನಯ್ ಕುಮಾರ್ (ನಾಯಕ), ಆರ್. ಸಮರ್ಥ, ಅಭಿಷೇಕ್ ರೆಡ್ಡಿ, ಮಾಯಾಂಕ್ ಅಗರ್‌ವಾಲ್, ಮಿರ್ ಕುನೈನ್ ಅಬ್ಬಾಸ್, ಪವನ್ ದೇಶಪಾಂಡೆ, ಗೌತಮ್, ಬಿನ್ನಿ, ಮಿಥುನ್, ಎಸ್. ಅರವಿಂದ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ನಿಶ್ಚಲ್, ಶರತ್ ಶ್ರೀನಿವಾಸ, ರೋನಿತ್ ಮೋರೆ.
