ಕನ್ನಡದ ಕಾಮನ್’ವೆಲ್ತ್ ವೀರನಿಗೆ ಇನ್ನೂ ಸಿಕ್ಕಿಲ್ಲ ಬಹುಮಾನ..!

ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ 21ನೇ ಆವೃತ್ತಿಯ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ 56 ಕೆ.ಜಿ ವಿಭಾಗದಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಭಾರತದ ಪರ ಮೊದಲ ದಿನವೇ ಪದಕದ ಖಾತೆ ತೆರೆದಿದ್ದರು.

Karnataka state government forgot felicitate  commonwealth medal winner p gururaj

ಬೆಂಗಳೂರು[ಜು.11]: 2018ರ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಭಾರತದ ಪರ ಪದಕದ ಖಾತೆ ತೆರೆದಿದ್ದ ವೇಯ್ಟ್’ಲಿಫ್ಟರ್ ಗುರುರಾಜ್ ಪೂಜಾರಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದರು. ಅವರ ಸಾಧನೆ ನೋಡಿ ಸರ್ಕಾರ ಘೋಷಿಸಿದ್ದ ಬಹುಮಾನ ಇನ್ನು ಕನಸಿನ ಮಾತಾಗಿಯೇ ಉಳಿದಿದೆ. 

ಹೌದು, ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ 21ನೇ ಆವೃತ್ತಿಯ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ 56 ಕೆ.ಜಿ ವಿಭಾಗದಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಭಾರತದ ಪರ ಮೊದಲ ದಿನವೇ ಪದಕದ ಖಾತೆ ತೆರೆದಿದ್ದರು. ರಾಜ್ಯಸರ್ಕಾರದ ಪರವಾಗಿ ಅಂದಿನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ 25 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಅದಾಗಿ ತಿಂಗಳುಗಳೇ ಕಳೆದಿದ್ದರೂ ಸರ್ಕಾರ ನೀಡಿದ ಭರವಸೆ ಈಡೇರಿಸಿಲ್ಲ ಎಂದು ಸುವರ್ಣನ್ಯೂಸ್ ಡಾಟ್ ಕಾಂ ನೊಂದಿಗೆ ಎಕ್ಸ್’ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಮುಂಬರುವ ಒಲಿಂಪಿಕ್ಸ್’ನಲ್ಲಿ ಪದಕ ಗೆಲ್ಲುವ ಕನಸು ಹೊತ್ತಿರುವ ಗುರುರಾಜ್ ಸರ್ಕಾರದ ನೆರವು ಹಾಗೂ ಪ್ರಾಯೋಜಕರ ನಿರೀಕ್ಷೆಯಲ್ಲಿದ್ದಾರೆ...

ಕನ್ನಡದ ಹೆಮ್ಮೆಯ ಕುವರ ಸುವರ್ಣನ್ಯೂಸ್ ಡಾಟ್ ಕಾಂ’ನೊಂದಿಗೆ ಎಕ್ಸ್’ಕ್ಲೂಸಿವ್ ಆಗಿ ಮಾತನಾಡಿದ್ದು ನೀವೊಮ್ಮೆ ಕೇಳಿ...

Latest Videos
Follow Us:
Download App:
  • android
  • ios